ʼಪ್ಲಸ್ ಇಂಟು ಮೈನಸ್ ಈಸ್ ಈಕ್ವಲ್ ಟು ಲವ್‌ʼ – ಪೋಸ್ಟರ್ ಬಿಡುಗಡೆ

0

ಪುತ್ತೂರು: ಹಿತೇಶ್ ಜೋಗಿ ನಿರ್ದೇಶನದ ಪ್ಲಸ್ ಇಂಟು ಮೈನಸ್ ಈಸ್ ಈಕ್ವಲ್ ಟು ಲವ್ ತುಳು ಆಲ್ಬಮ್ ಸಾಂಗ್‌ನ ಪೋಸ್ಟರ್ ಫೆ. 15ರಂದು ಬಿಡುಗಡೆಗೊಂಡಿತು. ಕಾಂತಾರ ಚಲನಚಿತ್ರ ಖ್ಯಾತಿಯ ಸ್ವರಾಜ್ ಬಿ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಹಿತೇಶ್ ಜೋಗಿ, ಆದರ್ಶ ಎಸ್ ಎಂ, ಸಚಿನ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಬೆಂಕ್ಯ ಹಾಗೂ ಪೂಜಾ ಮಧುರ ಕಂಠದಲ್ಲಿ ಮೂಡಿಬಂದಿರುವ ಈ ಆಲ್ಬಮ್ ಸಾಂಗ್‌ಗೆ ಸಂಜಯ್ ನಾರಾಯಣ್ ಛಾಯಾಗ್ರಹಣ, ಆದರ್ಶ್ ಎಸ್ ಎಂ ಕಥೆ, ಚಿತ್ರಕಥೆ ಹಾಗೂ ಸಂಕಲನವನ್ನು ಮಾಡಿದ್ದಾರೆ. ಅಖಿಲ್, ಚೈತ್ರ ಕಡಂಬರ, ಪ್ರಫುಲ್ಲ ಗಣೇಶ್ ಮತ್ತಿತರರು ನಟಿಸಿರುವ ಈ ಆಲ್ಬಮ್ ಸಾಂಗ್ ಸದ್ಯದಲ್ಲೇ ಜೋಗಿ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here