ಉಪ್ಪಿನಂಗಡಿ: ಇಲ್ಲಿನ ಕುದ್ಲೂರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯುನೈಟೆಡ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಕುದ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುದ್ಲೂರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ರಫೀಕ್ ಮಾಸ್ಟರ್, ಕಾರ್ಯದರ್ಶಿಗಳಾಗಿ ಸಫ್ವಾನ್ ಎಚ್.ಕೆ., ನೌಫಲ್ ಕುದ್ಲೂರು, ಝೀಶಾನ್ ಕುದ್ಲೂರು, ಕೋಶಾಧಿಕಾರಿಯಾಗಿ ಮುಝಾಫರ್ ಕುದ್ಲೂರು, ಉಪಾಧ್ಯಕ್ಷರಾಗಿ ಮನ್ಸೂರು ಕುದ್ಲೂರು, ಕಲಂದರ್ ಕುದ್ಲೂರು, ಫಾರೂಕ್ ಕುದ್ಲೂರು, ಸಂಘಟನಾ ಕಾರ್ಯದರ್ಶಿಯಾಗಿ ಫಾರೂಕ್ ಝಿಂದಗಿ, ಕಾನೂನು ಸಲಹೆಗಾರರಾಗಿ ವಕೀಲ ಭಾತೀಷಾ ಉಪ್ಪಿನಂಗಡಿ, ಸಲಹೆಗಾರರಾಗಿ ಲತೀಫ್ ಡ್ರೈಫಿಶ್, ಶರ್ಫುದ್ದೀನ್, ರಶೀದ್ ನ್ಯಾಷನಲ್, ಅನಸ್ ಕುದ್ಲೂರು, ಮುಸ್ತಾಕ್ ಕುದ್ಲೂರು, ನೌಶಾದ್ ಕುದ್ಲೂರು, ರಮೀಝ್ ನ್ಯಾಷನಲ್ ಆಯ್ಕೆಯಾದರು.
ವಿವಿಧ ಆಟಗಳ ಕೋಚಿಂಗ್, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಧನ ಸಹಾಯ, ಬಡ. ನಿರ್ಗತಿಕರಿಗೆ ಧನ ಸಹಾಯ, ಸಮಾಜಮುಖಿ ಚಟುವಟಿಕೆಗಳು ಮುಂತಾದ ಕಾರ್ಯಗಳನ್ನು ನಡೆಸುವ ಉದ್ದೇಶದಿಂದ ಈ ಕ್ಲಬ್ ಅನ್ನು ರಚಿಸಲಾಗಿದೆ.