ಆಲಂಕಾರು: ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14 ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಿದ್ದು, 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಡಬ ತಾಲೂಕಿನಿಂದ ಆಲಂಕಾರು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡಿದ್ದು ಒಣ ಕಸ ಸಂಗ್ರಹ ಕಾರ್ಯ ನಡೆಯುತ್ತಿದೆ. ಸಂಜೀವಿನಿ ಒಕ್ಕೂಟದ ಸಹಕಾರದೊಂದಿಗೆ ಉತ್ತಮವಾಗಿ ನಿರ್ವಹಣೆಗೆ ತೆರಿಗೆ ವಸೂಲಾತಿ,ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ, ವಿಶೇಷ ಚೇತನರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು 100% ಪರಿಣಾಮಕಾರಿಯಾಗಿ ಅನುಷ್ಠಾನ,ಎಲ್ಲಾ ಬೀದಿಗಳಿಗೆ ಬೀದಿ ದೀಪ ಅಳವಡಿಕೆ,ಅರ್ಹ ಫಲಾನುಭವಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವಿಕೆ,ಅಮೃತ ಉದ್ಯಾನವನ ನಿರ್ಮಾಣ,ಎಲ್ಲಾ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ, ವಸತಿ ಯೋಜನೆಯ ಫಲಾನುಭವಿಗಳಿಗೆ ಬಸವ ವಸತಿ ಯೋಜನೆ, ಆಲಂಕಾರು ಗ್ರಾ.ಪಂ ನಲ್ಲಿ ಉತ್ತಮ ಅಡಳಿತಕ್ಕೋಸ್ಕರ ಸಿ.ಸಿ ಟಿವಿ ಅಳವಡಿಕೆ, ಗ್ರಾ.ಪಂ ನಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಜಲ ಜೀವನ್ ಮಿಷನ್ ಯೋಜನೆಯಲ್ಲಿ ಗ್ರಾ.ಪಂನ ಅರ್ಹ ಎಲ್ಲಾ ಫಲಾನುಭವಿಗಳಿಗೆ ಶುದ್ದ ಕುಡಿಯುವ ನೀರು ಯೋಜನೆ ಅನುಷ್ಠಾನ ಹಾಗು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ವಿಶೇಷ ಸಾಧನೆ ಹಾಗು ಇನ್ನಿತರ ಯೋಜನೆಗಳ ಅನುಷ್ಠಾನದೊಂದಿಗೆ ರಾಜ್ಯ ಸರಕಾರ ವಿಧಿಸಿದ 136 ಸಾಧನೆಗಳಲ್ಲಿ ಕಡಬ ತಾಲೂಕಿನಲ್ಲಿ ಆಲಂಕಾರು ಗ್ರಾ.ಪಂ ಅತೀ ಹೆಚ್ಚು ಸಾಧನೆ ಮಾಡಿ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಗ್ರಾಮ ಪಂಚಾಯತ್ ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಬೇಕೆಂಬ ಸದುದ್ದೇಶದಿಂದ ಸರಕಾರ ಈ ಪ್ರಶಸ್ತಿಯನ್ನು ನೀಡುತ್ತಿದ್ದು.2021-22 ನೇ ಸಾಲಿನಲ್ಲಿ ಆಲಂಕಾರು ಗ್ರಾ.ಪಂ ಸಮಗ್ರ ಅಭಿವೃದ್ದಿಯನ್ನು ಪರಿಗಣಿಸಿ ಸರಕಾರವು ಗಾಂಧಿ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಗಾಂಧಿ ಪ್ರಶಸ್ತಿಯನ್ನು ಪಡೆಯಲು ಅಭಿವೃದ್ದಿಯಲ್ಲಿ ಸಹಕರಿಸಿದ ಗ್ರಾ.ಪಂ ಅಧ್ಯಕ್ಷರಿಗೆ,ಉಪಾಧ್ಯಕ್ಷರಿಗೆ ಹಾಗು ಸರ್ವಸದಸ್ಯರಿಗೆ , ಕಾರ್ಯದರ್ಶಿಗಳಿಗೆ, ಸಿಬ್ಬಂದಿವರ್ಗದವರಿಗೆ, ಎಲ್ಲಾ ಇಲಾಖಾಧಿಕಾರಿಗಳಿಗೆ ಹಾಗು ಸಮಸ್ತ ಗ್ರಾಮಸ್ಥರಿಗೆ ಹಾಗು ಸಂಘ ಸಂಸ್ಥೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳು
ಜಗನ್ನಾಥ ಶೆಟ್ಟಿ ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ
ಆಲಂಕಾರು ಗ್ರಾ.ಪಂಗೆ ಗಾಂಧಿ ಪುರಸ್ಕಾರ ಸಿಕ್ಕಿರುವುದು ಅತ್ಯಂತ ಸಂತೋಷವಾಗಿದೆ . ಇದು ಗ್ರಾಮಸ್ಥರಿಗೆ ಸಂದ ಗೌರವ. ಗಾಂಧಿ ಪುರಸ್ಕಾರ ಪ್ರಶಸ್ತಿ ಸಿಗಲು ಅಭಿವೃದ್ದಿಯಲ್ಲಿ ಸಹಕರಿಸಿದ ಗ್ರಾ. ಪಂ ಅಭಿವೃದ್ದಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ, ಸಿಬ್ಬಂದಿಗಳಿಗೆ, ಇಲಾಖಾಧಿಕಾರಿಗಳಿಗೆ, ಎಲ್ಲಾ ಜನಪ್ರತಿನಿಧಿಗಳಿಗೆ, ಗ್ರಾಮಸ್ಥರಿಗೆ, ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್ನು ಕೂಡ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಎಲ್ಲರೂ ಸಹಕರಿಸುವಂತೆ ವಿನಂತಿ.
ಸದಾನಂದ ಆಚಾರ್ಯ, ಅಧ್ಯಕ್ಷರು, ಆಲಂಕಾರು ಗ್ರಾ.ಪಂ