ಸಾಹಿತ್ಯ ರತ್ನ ಪ್ರಶಸ್ತಿಗೆ ಶಾಂತಾ ಕುಂಟಿನಿ ಆಯ್ಕೆ

0

ಪುತ್ತೂರು: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 18 ನೇ ವಾರ್ಷಿಕೋತ್ಸವದ ಅಂಗವಾಗಿ ಫೆ.25ರಂದು ನಡೆಯುವ ರಂಗವೇದಿಕೆ ಉದ್ಘಾಟನೆ
ಹಾಗೂ ನಾಟ್ಯ ಗುರುಗಳ ಷಷ್ಟ್ಯಬ್ಧಿಯ ಕಾರ್ಯಕ್ರಮದಲ್ಲಿ ಪುತ್ತೂರಿನ ಸಾಹಿತಿ, ಸಂಘಟಕಿ ಶಾಂತಾ ಕುಂಟಿನಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.‌

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು, ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ. ಟಿ. ಶಾಮ ಭಟ್, ಪಡ್ರೆ ಚಂದು ಸ್ಮಾರಕದ ಸ್ಥಾಪಕಾಧ್ಯಕ್ಷರಾದ ಯಕ್ಷನಾಟ್ಯ ಗುರು ಸಬ್ಬಣಕೋಡಿ ರಾಮ್ ಭಟ್, ದಿಗ್ವಿಜಯ ಗ್ರೂಪ್ ಆಫ್ ಕಂಪೆನಿಸ್ ಚೇರ್ಮೆನ್ ಮಾವೆ ದಿನಕರ ಭಟ್, ಯಕ್ಷಪ್ರಭಾ ಮಾಸ ಪತ್ರಿಕೆ ಸಂಪಾದಕರಾದ ಯಕ್ಷಗಾನ ಕಲಾವಿದ ಕೆ.ಎಲ್.ಕುಂಡಂತ್ತಾಯ, ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಗೌರವಾಧ್ಯಕ್ಷ ಎನ್.ಕೆ. ರಾಮಚಂದ್ರ ಭಟ್, ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣ್ಚಿತ್ತಾಯ ಪೆರ್ಲ, ನಿವೃತ್ತ ಅಧ್ಯಾಪಕರಾದ ಯಕ್ಷಗಾನ ಕಲಾವಿದ
ಮಂಗೇಶ್ ವಿಟ್ಲ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶಾಂತಾ ಕುಂಟಿನಿಯವರು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿರುವ ಶಾಂತಾ ಸಭಾಭವನದ ಮಾಲಕರೂ ಆಗಿದ್ದಾರೆ.

LEAVE A REPLY

Please enter your comment!
Please enter your name here