ಆಲಡ್ಕ ಶ್ರೀ ಸದಾಶಿವ ದೇವಸ್ಥಾನ: ಜಾತ್ರೋತ್ಸವದ ಗೊನೆ ಮುಹೂರ್ತ

0

100 ವರ್ಷದ ಬಳಿಕ ಪ್ರಥಮ ಜಾತ್ರೋತ್ಸವಕ್ಕೆ ಸಂಭ್ರಮದ ಆರಂಭ


ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ. 2 ಮತ್ತು 3 ರಂದು ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಮತ್ತು ನೂತನ ರಂಗಮಂಟಪದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮವು ಫೆ. 25 ರಂದು ನಡೆಯಿತು. ಬಿ ವಿ ಶಗ್ರಿತ್ತಾಯವರ ತೋಟದಲ್ಲಿ ಗೊನೆ ಕಡಿದು ಮುಹೂರ್ಥ ಮಾಡಲಾಯಿತು.


ಕಳೆದ ವರ್ಷ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆದಿತ್ತು. ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಬಾರಿ ಜಾತ್ರೋತ್ಸವ ನಡೆಯಲಿದೆ. 100 ವರ್ಷಗಳ ಬಳಿಕ ಪ್ರಥಮ ಜಾತ್ರೋತ್ಸವ ನಡೆಯುತ್ತಿದ್ದು ದೇವಸ್ಥಾನ ವ್ಯಾಪ್ತಿಯ ಮುಂಡೂರು ಮತ್ತು ಕೆದಂಬಾಡಿ ಗ್ರಾಮದ ಭಕ್ತಾದಿಗಳು ಈಗಾಗಲೇ ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪ್ರಥಮ ಜಾತ್ರೋತ್ಸವವು ಅದ್ದೂರಿಯಾಗಿ ನಡೆಯಲಿದೆ. ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ,ಸದಸ್ಯರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು.

LEAVE A REPLY

Please enter your comment!
Please enter your name here