ವಾರಿಜಾ ಶೆಟ್ಟಿಯವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿ- ರಾಕೇಶ್ ರೈ
ಪುತ್ತೂರು: ಸವಣೂರು ಕಿನಾರ ದಿ.ಸಂಕಪ್ಪ ಶೆಟ್ಟಿಯವರ ಪತ್ನಿ ವಾರಿಜಾ ಶೆಟ್ಟಿಯವರ ಉತ್ತರ ಕ್ರಿಯೆಯು ಫೆ. 27 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ವಾರಿಜಾ ಶೆಟ್ಟಿಯವರು ತಮ್ಮ ಜೀವನದ ಉದ್ದಕ್ಕೂ ಸಂತೃಪ್ತ ಬದುಕು ಸಾಗಿಸಿ, ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ತನ್ನ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸಮಾಜ ಮತ್ತು ಕುಟುಂಬಕ್ಕೆ ಮಾದರಿಯಾಗಿದ್ದ ವಾರಿಜಾರವರ ಜೀವನ ನಮಗೆಲ್ಲ ಮಾದರಿಯಾಗಿದೆ ಎಂದು ಹೇಳಿ, ನುಡಿನಮನ ಸಲ್ಲಿಸಿದರು.
ಸಮಾರಂಭದಲ್ಲಿ ಜನಪ್ರತಿನಿಧಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳ ಮುಖಂಡರುಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಖಂಡರುಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.
ವಾರಿಜಾ ಶೆಟ್ಟಿಯವರ ಪುತ್ರರಾದ ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ರಿಯರಾದ ಜಯಶ್ರೀ ಎಸ್.ಭಂಡಾರಿ, ವಸಂತ ಪಿ.ಶೆಟ್ಟಿ, ಉಷಾ ಎಸ್.ಆಳ್ವ, ಅಳಿಯಂದಿರಾದ ಸೀತಾರಾಮ ಭಂಡಾರಿ, ಪ್ರಕಾಶ್ ಶೆಟ್ಟಿ, ಸುರೇಶ್ ಆಳ್ವ, ಸೊಸೆಯಂದಿರರಾದ ವನಿತಾ ಎಸ್ ಶೆಟ್ಟಿ, ಸುಜಾತ ಎಸ್.ಶೆಟ್ಟಿ ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.