ವಿದ್ಯಾ ಸಂಸ್ಥೆಯ ಬೆಳವಣಿಗೆ ಯಾವುದೇ ಪ್ರಚಾರದ ಕಟೌಟ್, ಬೋರ್ಡ್ ಗಳಿಂದಲ್ಲ-ಗೋಕುಲ್ ನಾಥ್ ಪಿ.ವಿ ಸ್ಥಾಪಕಾಧ್ಯಕ್ಷರು
ಪುತ್ತೂರು : ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಇಲ್ಲಿ 2022-23ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್ ನಾಥ್ ಪಿ.ವಿ ವಹಿಸಿದ್ದರು. ಕಾರ್ಯಕ್ರಮವನ್ನು ದಿವ್ಯಾ ಗೋಪಿನಾಥ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯನಿ ಪ್ರಮೀಳಾ ಎನ್.ಡಿ ಮಾತನಾಡಿ ಮಕ್ಕಳ ಬದುಕಿನಲ್ಲಿ ಉತ್ತಮ ಗುರಿ ಹಾಗೂ ಗುರುಗಳ ಮಾರ್ಗದರ್ಶನ ಮುಖ್ಯವಾಗಿರುತ್ತದೆ. ಸಂಸ್ಥೆಯ ಜೊತೆಗಿನ ಬಾಂಧವ್ಯ ಶಾಶ್ವತವಾಗಿರುತ್ತದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ದ್ವಿತೀಯ ಪಿಯುಸಿ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ವನ್ಯಶ್ರೀ, ರೇಷ್ಮಾ, ನವ್ಯಶ್ರೀ, ಶೀಭಾ, ರೋಹನ್ ರಮೇಶ್, ಮೊಹಮ್ಮದ್ ಸಫರಾನ್, ಅಲ್ಫೀನ ಜಾರ್ಜ್, ವಾಫಿ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಹಳೆ ವಿದ್ಯಾರ್ಥಿ ಭವಿಷ್ ಮಾತನಾಡುತ್ತಾ ಸಂಸ್ಥೆಯಲ್ಲಿ ತಾನು ಕಳೆದ ಕ್ಷಣದ ಕುರಿತು ಅದರಿಂದ ಪಡೆದ ಅನುಭವವನ್ನು ಹಂಚಿಕೊಂಡರು.
ಸಂಸ್ಥೆಯ ಪ್ರಾಂಶುಪಾಲ ಹೇಮಲತಾ ಗೋಕುಲ್ ನಾಥ್ ಮಾತನಾಡುತ್ತಾ ವಿದ್ಯಾರ್ಥಿಗಳು ಮೊಬೈಲ್ ಫೋನ್ ದಾಸರಾಗದೆ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿ ಉತ್ತಮ ಅಂಕವನ್ನು ಗಳಿಸಿ ಒಳ್ಳೆಯ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷದ ವಹಿಸಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್ ನಾಥ್ ಪಿ.ವಿ ಮಾತನಾಡುತ್ತ ಒಂದು ವಿದ್ಯಾಸಂಸ್ಥೆಯ ಬೆಳವಣಿಗೆ ಆ ವಿದ್ಯಾಸಂಸ್ಥೆಯಲ್ಲಿ ಕಲಿತ ಮಕ್ಕಳಿಗೆ ದೊರೆತ ಗುಣಮಟ್ಟದ ಶಿಕ್ಷಣ ಹಾಗೂ ಮಾರ್ಗದರ್ಶನದಿಂದಾಗಿ ಒಳ್ಳೆಯ ಉದ್ಯೋಗ, ಸಮಾಜದಲ್ಲಿ ಗೌರವ, ಸ್ಥಾನಮಾನ ಇವುಗಳ ಮೇಲೆ ಅವಲಂಬಿತವಾಗಿರುತ್ತದೆ, ಯಾವುದೇ ಪ್ರಚಾರದ ಬೋರ್ಡುಗಳಿಂದ ಅಲ್ಲ ಎಂದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇತ್ತೀಚೆಗೆ ಅಗಲಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್ ನಾಥ್ ಪಿ ವಿ ಇವರ ಮಾತೃಶ್ರೀ ಸಾವಿತ್ರಿ ವಿಜಯ ಗೋಪಾಲ್ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾತಿ ಹಾಗೂ ಖುಷಿ ಪ್ರಾರ್ಥಿಸಿದರು. ಖುಷಿ ಸ್ವಾಗತಿಸಿದರು. ಮೊಹಮ್ಮದ್ ಅಶಾಜ್ ವಂದಿಸಿದರು.