ಖಾಸಗಿ ವಿಚಾರ ಆಡಿಯೋ ವೈರಲ್ – ಪೊಲೀಸರಿಗೆ ದೂರು

0

ಪುತ್ತೂರು:ತನ್ನ ಖಾಸಗಿ ವಿಚಾರದ ಆಡಿಯೋವನ್ನು ವೈರಲ್ ಮಾಡಿ ಮಾನ ಹಾನಿ ಮಾಡಿರುವುದಾಗಿ ಪಡ್ನೂರು ಗ್ರಾಮದ ಸುದರ್ಶನ್ ಗೌಡ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ, ಪಡ್ನೂರು ಗ್ರಾಮದ ರಾಮನಗರ ಲೇ ಔಟ್‌ನ ಸುದರ್ಶನ್ ಗೌಡ ಅವರು ರಾಜೀನಾಮೆ ನಿರ್ಧಾರದ ಕುರಿತು ಮಾತನಾಡಿದ್ದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇದೇ ವಿಚಾರವಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಗೃಹ ರಕ್ಷಕ ಸಿಬ್ಬಂದಿ ಸಂತೋಷ್ ಎಂಬವರು ಅರ್ಜಿದಾರರ ವಿಚಾರದ ಕುರಿತು ಆಡಿಯೋವನ್ನು ವೈರಲ್ ಮಾಡಿ ಮಾನ ಹಾನಿ ಮಾಡಿರುವ ಬಗ್ಗೆ’ ಎಂದು ಪೊಲೀಸರು ದೂರು ಸ್ವೀಕರಿಸಿದ್ದಾರೆ.

LEAVE A REPLY

Please enter your comment!
Please enter your name here