ತುಳುನಾಡಿನ ದೈವಾರಾಧನೆ ಹಾಗೂ ಉಳಿದ ಪ್ರತಿಯೊಂದು ಆಚರಣೆಗಳ ಅಡಿಪಾಯ ನಂಬಿಕೆ ಎನ್ನುವುದನ್ನು ಆ ನಂಬಿಕೆ ಕಳೆದುಕೊಂಡಾಗ ದೈವ ತನ್ನ ಮಹಿಮೆಯನ್ನು ತೋರಿಸಿಕೊಡುತ್ತದೆ ಎಂಬುದನ್ನು ನೇಸರ ಪ್ರೋಡಕ್ಷನ್ ಮೂಲಕ ನಿರ್ಮಾಣಗೊಂಡ ಕಿರುಚಿತ್ರ “ಕಾರ್ಣಿಕ” ಸುಂದರವಾದ ಕಥಾ ಹಂದರದ ಮೂಲಕ ಹೇಳುವ ಕೆಲಸವನ್ನು ಮಾಡಿದ್ದು, ಭಾರತ ವಾಣಿ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಕಥೆ ಹಾಗೂ ಚಿತ್ರಕಥೆ ಶ್ರೀರಾಮ್ ಬರೆದಿದ್ದು ಸಂಭಾಷಣೆ ಮತ್ತು ನಿರ್ದೇಶನ ಪ್ರಣವ ಭಟ್ ಮಾಡಿದ್ದಾರೆ.
ನಂಬಿಕೆಯೇ ಇಲ್ಲದ ವ್ಯಕ್ತಿಗೆ ಯಾವ ರೀತಿ ಮಾಯೆಯ ಮೂಲಕ ದೈವವು ತನ್ನ ಅಸ್ಥಿತ್ವವನ್ನು ತಿಳಿಸಿ ನಂಬಿಕೆ ಬರುವಂತೆ ಮಾಡುತ್ತದೆ ಎಂಬುದು ಈ ಕಿರುಚಿತ್ರದ ಸಾರಾಂಶವಾಗಿದೆ. ದೈವಾರಾಧನೆಯ ಮಹತ್ವವನ್ನು ಹೇಳುವ ಮೂಲಕ ನಿಧಾನ ತಿರುವುಗಳೊಂದಿಗೆ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡುವ ರೀತಿ ಸೊಗಸಾಗಿ ಮೂಡಿಬಂದಿದೆ.
ಆದಿತ್ಯ ಭಟ್ ಛಾಯಾಗ್ರಹಣ ಮಾಡಿದ್ದು, ಆರ್ಯ ನಾಯಕ್ ಅವರು ಸಂಕಲನ ಮಾಡಿದ್ದಾರೆ ಮತ್ತು ಶ್ರೀರಾಮ್, ಪ್ರಮೋದ್ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಚಿರಂತನ ಕೆ.ವಿ, ಶುಭಾ, ಆದಿತ್ಯ ನಟಿಸಿದ್ದಾರೆ. ತುಳುನಾಡಿನ ದೈವಾರಾಧನೆಯ ಕುರಿತು ಅರಿವು ಮೂಡಿಸುವ ಕಿರುಚಿತ್ರ ಇದಾಗಿದೆ.