ಬೆಳಂದೂರು: ಚಿರತೆ ಪ್ರತ್ಯಕ್ಷಗೊಂಡಿದೆ ಎನ್ನಲಾದ ಪರಿಸರಗಳಿಗೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ : ಚಿರತೆಯ ಚಲನ ವಲನ ಕಂಡು ಬಂದಲ್ಲಿ ಮಾಹಿತಿ ನೀಡಲು ನಾಗರಿಕರಿಗೆ ಸೂಚನೆ

0

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿದೆ ಎನ್ನಲಾದ ಪರಿಸರಗಳಿಗೆ ಅರಣ್ಯ ಇಲಾಖಾಧಿಕಾರಿಗಳು 2ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆಯು ದಿನದ ಇಪ್ಪತ್ನಾಲ್ಕು ಗಂಟೆಯೂ ಸಿದ್ದವಾಗಿದ್ದು ಸಾರ್ವಜನಿಕರು ಯಾವುದೇ ಸಮಯದಲ್ಲಿಯೂ ಕರೆ ಮಾಡಬಹುದು ಮತ್ತು ಮುಂದಿನ ದಿನಗಳಲ್ಲಿ ಈ ಪರಿಸರದಲ್ಲಿ ಚಿರತೆಯ ಚಲನ ವಲನ ಕಂಡು ಬಂದರೆ ಚಿರತೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗುವುದು ಎಂದು ಅಽಕಾರಿಗಳು ಭರವಸೆ ನೀಡಿದ್ದಾರೆ.

ಬೆಳಂದೂರು ಗ್ರಾಮದ ಮೀಪಾಲು, ಪಾತಾಜೆ, ಮಾದೋಡಿ ಹಾಗೂ ಅಬೀರ, ಕಾನಾವು ಪರಿಸರಗಳಲ್ಲಿ ಚಿರತೆಯೊಂದು ಹಲವು ದಿನಗಳಿಂದ ತಿರುಗಾಡುತ್ತಿದೆ. ಇದರಿಂದ ಜನರು ಭಯಭೀತಿಯಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬ‌ಂಧ ಪಟ್ಟವರು ಸೂಕ್ತ ಕ್ರಮಕೈಗೊಂಡು ತಮಗೆ ರಕ್ಷಣೆ ನೀಡುವಂತೆ ಬೆಳಂದೂರು ಗ್ರಾಮ ಪಂಚಾಯತ್‌ಗೆ ಸ್ಥಳೀಯ ಗ್ರಾ. ಪಂ.ಸದಸ್ಯ ಜಯಂತ ಅಬೀರರವರ ಮುಖಾಂತರ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಅರಣ್ಯ ಇಲಾಖೆಯವರು ಅ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನರಿಮೊಗರು ಶಾಖೆಯ ಉಪವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ, ಬೆಳ್ಳಾರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ, ಪ್ರಸಾದ್ ಕೆ.ಜೆ, ಐವರ್ನಾಡು ಗಸ್ತು ಅರಣ್ಯ ಪಾಲಕ ಚಿದಾನಂದ, ಕಲ್ಪಡ ಮಲೆ ಗಸ್ತು ಅರಣ್ಯ ಪಾಲಕಿ ತೇಜಶ್ವಿನಿ, ಸವಣೂರು ಗಸ್ತು ಅರಣ್ಯ ಪಾಲಕ ದೀಪಕ್ ಕೆ.ಎಸ್, ಅರಣ್ಯ ವೀಕ್ಷಕ ಶೀನಪ್ಪ, ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಪಂಚಾಯತ್ ಸಿಬ್ಬಂದಿ ಹರ್ಷಿತ್, ಪ್ರಜೀತ್ ರೈ ಪಾತಾಜೆ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here