




ನಿಡ್ಪಳ್ಳಿ; ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಶಾಲಾ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 7 ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಜಾನಕಿ ತಿಳಿಸಿದ್ದಾರೆ.



ಇಬ್ರಾಹಿಂ ಹಾಶಿರ್ ಧಾರ್ಮಿಕ ಪಠಣದಲ್ಲಿ ಪ್ರಥಮ, ಚಿತ್ರಕಲೆಯಲ್ಲಿ ಆಯಿಶಾ ಮಾಝಿಯಾ ಪ್ರಥಮ, ಕಥೆ ಹೇಳುವುದು ಪ್ರಾದ್ಯಾ ಪಿ.ಕೆ ಪ್ರಥಮ,ಸುಜಿತ್ ಕ್ಲೇ ಮಾಡೆಲಿಂಗ್ ಪ್ರಥಮ,ಧಾರ್ಮಿಕ ಪಠಣ ಮತ್ತು ಚಿತ್ರಕಲೆ ಅಹಮ್ಮದ್ ನಜಾಹ್ ಪ್ರಥಮ, ಮಹಮ್ಮದ್ ಅಪ್ ಹಂ ಆಶುಭಾಷಣ ಪ್ರಥಮ, ಪೂರ್ಣೆಶ್ ಎಸ್.ಪಿ ಕ್ಲೆ ಮಾಡೆಲಿಂಗ್ ದ್ವಿತೀಯ,ಶಮ್ನಾ ಫಾತಿಮಾ ಪ್ರಬಂಧ ರಚನೆ ದ್ವಿತೀಯ, ಅಭಿನಯ ಗೀತೆ ಪ್ರಾದ್ಯಾ ದ್ವಿತೀಯ, ಹಿಂದಿ ಕಂಠಪಾಠ ಭೂಮಿಕಾ ತೃತೀಯ, ಕನ್ನಡ ಕಂಠಪಾಠ ಆಸಿಯಾ ಆಮ್ನಾ ದ್ವಿತೀಯ, ಆಹಮ್ಮದ್ ತಾಹ್ವಿರ್ ಕನ್ನಡ ಕಂಠಪಾಠ ತೃತೀಯ, ನಫಿಸತ್ ಶೈಮಾ ಇಂಗ್ಲಿಷ್ ಕಂಠಪಾಠ ತೃತೀಯ, ಛದ್ಮವೇಷ ರಿಷಿಕ್ ಅರ್.ಬಿ ತೃತೀಯ, ಕಥೆ ಹೇಳುವುದು ಚಾರ್ವಿ.ಕೆ ಗೌಡ ದ್ವಿತೀಯ, ಅಭಿನಯ ಗೀತೆ ಚಾರ್ವಿ.ಕೆ ಗೌಡ ತೃತೀಯ ಬಹುಮಾನ ಪಡೆದು ಕೊಂಡರು.














