




ಪುತ್ತೂರು:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ (ರಿ ) ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪೋಲೀಸ್ ಇಲಾಖೆ ಪುತ್ತೂರು ದ.ಕ ಆರೋಗ್ಯ ಇಲಾಖೆ ಪುತ್ತೂರು ದ ಕ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ ) ಮಂಗಳೂರು ದ ಕ ಇವರುಗಳ ಸಹಯೋಗದೊಂದಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣಾ ದಿನದ ಕಾರ್ಯಕ್ರಮದ ಅಂಗವಾಗಿ ಕಾನೂನು ಮಾಹಿತಿ ಕಾರ್ಯಾಗಾರ ಡಿ.12ರಂದು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆಯಿತು.



ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ್ ರೈ ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛತೆಗೆ ಗಮನ ಕೊಟ್ಟು, ಪರಿಸರ ಹಾಗೂ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಲು ತಿಳಿಸಿ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಕುರಿತು ತಿಳಿಸಿದರು.






ಪುತ್ತೂರು hospital of ayurvedic puttur BAMS ಡಾ l ಪ್ರದೀಪ್ ಕುಮಾರ್ ಮಾತನಾಡಿ, ಗ್ರಾಮೀಣ ಶಾಲಾ ವಿದ್ಯಾರ್ಥಿಗಳು, ನಗರ ಶಾಲಾ ವಿದ್ಯಾರ್ಥಿಗಳಿಗಿಂತ ಅಧಿಕ ವ್ಯಾಯಾಮ, ಒಳ್ಳೆಯ ಗುಣ ನಡತೆ, ಗುಣ ಮಟ್ಟದ ಆಹಾರ ದೊರಕುತ್ತಿದ್ದು ಅವರ ಅರೋಗ್ಯ ಮಟ್ಟ ಉತ್ತಮವಾಗಿರುತ್ತದೆ. ಅದರ ಜೊತೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಸಾಧ್ಯವಾದಷ್ಟು ಭಾವನೆಗಳನ್ನು ಹೆತ್ತವರ ಜೊತೆ ಹಂಚಿ ಕೊಳ್ಳಿ. ವಿಷಕಾರಿ ಆಹಾರ ಹಾಗೂ ಮಕ್ಕಳಲ್ಲಿ ಬೊಜ್ಜು ಬೆಳವಣಿಗೆಗೆ ಕಾರಣ ಮತ್ತು ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಪಿಎಸ್ಐ ಆಂಜನೇಯ ರೆಡ್ಡಿ ಮಾತನಾಡಿ, ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸುವ ಪ್ರಕ್ರಿಯೆ ಯೋಗ, ಸಾಂದೀಪನಿ ಮಕ್ಕಳಿಗೆ ಮನಸ್ಸಿನ ಜೊತೆಗೆ ದೈಹಿಕ ಚಟುವಟಿಕೆಗಳು ಉತ್ತಮವಾಗಿ ಸಿಗುತ್ತಿದೆ. ಪ್ರಸ್ತುತ ಮಕ್ಕಳು ಮಾನಸೀಕ ವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದು ಶ್ಲೋಕ, ಭಜನೆ ಹಾಗೂ ಭಗವದ್ಗೀತೆಯಿಂದ ಮಕ್ಕಳನ್ನು ಸರಿಯಾದ ದಾರಿಗೆ ತರಲು ಸಾಧ್ಯ ಎಂದರು.
ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಉಪಸ್ಥಿತರಿದ್ದರು. ಪ್ಯಾನೆಲ್ ವಕೀಲ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕ ರವಿಶಂಕರ್ ವಂದಿಸಿದರು.
ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯರು, ಪುತ್ತೂರು ವಕೀಲರ ಸಂಘದ ಜೊತೆಕಾರ್ಯದರ್ಶಿ ಮಮತಾ ಸುವರ್ಣ, ಪ್ಯಾರಾ ಲೀಗಲ್ ವಾಲೆಂಟಿಯರ್ ನಯನ ರೈ ,ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್ , ಪ್ಯಾನಲ್ ವಕೀಲೆ ಚಂದ್ರಾವತಿ, ಶಾಲಾ ಮುಖ್ಯ ಗುರು ಪ್ರಸನ್ನ ಕೆ ಹಾಗೂ ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









