ಪುತ್ತೂರು: ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದ ಮೂಲನಾಗ ಸಾನಿಧ್ಯದಲ್ಲಿ ಮಾ.7 ಮತ್ತು ೮ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಾಗಪ್ರತಿಷ್ಠಾ ಕಲಶ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾ.7ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ, ಮಾ.೮ರಂದು ಬೆಳಿಗ್ಗೆ ೬ರಿಂದ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಸಂಸ್ಕಾರ ಮಂಗಲ ಹೋಮ, ಆಶ್ಲೇಷಾ ಬಲಿ, ಅಷ್ಟವಟು ಆರಾಧನೆ, ಪಂಚವಿಂಶತಿ ಕಲಶ ಪೂಜೆ, ನಾಗಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಪಂಚವಿಂಶತಿ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಎಂ.ಲೋಕಪ್ಪ ಗೌಡ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಮಾ.7.8: ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದ ಮೂಲನಾಗ ಸಾನಿಧ್ಯದಲ್ಲಿ ನಾಗಪ್ರತಿಷ್ಠಾ ಕಲಶ