ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರ ವಾರ್ಷಿಕೋತ್ಸವ `ಸಂಪ್ಯ ಆರೋಗ್ಯ ಮೇಳ’ ಧನ್ವಂತರಿ ಹವನ, 16 ಪ್ರತ್ಯೇಕ ವಿಭಾಗಳಲ್ಲಿ ಚಿಕಿತ್ಸೆ, 45 ವೈದ್ಯರುಗಳಿಂದ ಚಿಕಿತ್ಸೆ, ಉಚಿತ ಔಷಧಿ ವಿತರಣೆ

0

ಪುತ್ತೂರು:ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ ಇದರ ಆಶ್ರಯದಲ್ಲಿ ನವಚೇತನ ಯುವಕ ಮಂಡಲ ಸಂಪ್ಯ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿಯ ಸಹಯೋಗದಲ್ಲಿ ನಡೆಯುವ ವೈದ್ಯಕೀಯ ಶಿಬಿರದ ವಾರ್ಷಿಕೋತ್ಸವ `ಸಂಪ್ಯ ಆರೋಗ್ಯ ಮೇಳ’ ಹಾಗೂ ಧನ್ವಂತರಿ ಹವನವು ಮಾ.೫ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.

ಶಿಬಿರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಧನ್ವಂತರ ಹವನವನ್ನು ನಡೆದು, ಮಹಾವಿಷ್ಣುಮೂರ್ತಿ ದೇವರಿಗೆ ಪೂಜೆ, ಪ್ರಾರ್ಥನೆ ನಡೆದ ಬಳಿಕ ಭಾರತ ಮಾತೆಗೆ ಪುಷಾರ್ಚಣೆ ನಡೆಸಲಾಯಿತು. ವೈದ್ಯಕೀಯ ಶಿಬಿರದಲ್ಲಿ ೧೬ ಪ್ರತ್ಯೇಕ ವಿಭಾಗಳಲ್ಲಿ ಚಿಕಿತ್ಸೆಯಲ್ಲಿ ಪುತ್ತೂರು, ಸುಳ್ಯ ಹಾಗೂ ಮಂಗಳೂರಿನ ಸುಮಾರು ೪೫ ವೈದ್ಯರುಗಳು ಸಹಕರಿಸಿದರು. ವಿವಿಧ ಚಿಕಿತ್ಸಾ ವಿಭಾಗಗಳಲ್ಲಿ ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ವಿವಿಧ ಆಸ್ಪತ್ರೆಗಳು, ಭಾರತೀಯ ಜನೌಷಧಿ ಕೇಂದ್ರ, ಇತರ ಔಷಧ ಕಂಪನಿಗಳು, ಲ್ಯಾಬೋರೇಟರಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಭಕ್ತಾದಿಗಳು ಸಹಕರಿಸಿದರು. ಶಿಬಿರದಲ್ಲಿ ಉಚಿತ ಚಿಕಿತ್ಸೆಯೊಂದಿಗೆ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ಊಟ, ಉಪಹಾರಗಳನ್ನು ಒದಗಿಸಲಾಗಿತ್ತು.
ವೈದ್ಯಕೀಯ ಶಿಬಿರದ ಮೂಲಕ ದೇವರನ್ನು ತೃಪ್ತಿಪಡಿಸುವ ಕಾರ್ಯದ ದೇವಸ್ಥಾನದಿಂದ ನಡೆಯುತ್ತಿದೆ-ಸುಬ್ರಹ್ಮಣ್ಯ ಶ್ರೀ
ನಂತರ ನಡೆದ ವಾರ್ಷಿಕ ಶಿಬಿರ ಸಂಪ್ಯ ಆರೋಗ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀಥ ಸ್ವಾಮಿಜಿಯವರು ಮಾತನಾಡಿ, ಜೀವನದಲ್ಲಿ ಎತ್ತರವಾದ ಆಧ್ಯಾತ್ಮಿಕತೆ, ವಿಸ್ತಾರವಾದ ಸಾಮಾಜಿಕತೆ ಮುಖ್ಯ. ಸಾಮಾಜಿಕ ಸೇವೆ ಎಂಬುದು ಕಾಗದದ ರೀತಿ. ಅದಕ್ಕೆ ದೇವರ ಭಕ್ತಿಯ ಮುದ್ರೆ ಬಿದ್ದರೆ ಜೀವನ ಸಾರ್ಥಕ. ಸಾಮಾಜಿಕ ಸೇವೆಯ ಮಧ್ಯೆ ದೇವರ ಭಕ್ತಿಯ ನೆನಪಿರಬೇಕು. ಸಾಮಾಜಿಕ ಸೇವೆ ಎಂಬುದು ದೇವರ ಇಚ್ಚೆ. ದೇವಸ್ಥಾನದ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯರವರಿಗೆ ದೇವಸ್ಥಾನದಲ್ಲಿ ಸಾಮಾಜಿಕ ಸೇವೆ ನೀಡುವ ಉತ್ತಮ ಯೋಚನೆ ಬಂದಿರುವುದ ಶ್ಲಾಘನೀಯ. ಸುರೇಶ್ ಪುತ್ತೂರಾಯರವರ ಸಾಮಾಜಿಕ ವಿಸ್ತಾರದಲ್ಲಿ ಪ್ರತಿಯೊಬ್ಬರಿಗೂ ಚಿಕಿತ್ಸೆ ದೊರೆಯುತ್ತಿದೆ. ಪ್ರತಿಮೆಗೆ ಪೂಜೆ ಮಾಡಿದಂತೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿಯೂ ದೇವರಿದ್ದಾರೆ. ಉಚಿತ ವೈದ್ಯಕೀಯ ಶಿಬಿರದ ಮೂಲಕ ಪ್ರತಿಯೊಬ್ಬ ಜೀವರಾಶಿಗಳನ್ನು ಸಂತೋಷಗೊಳಿಸುವ ಮೂಲಕ ಗರ್ಭಗುಡಿಯಲ್ಲಿರುವ ದೇವರಿಗೆ ಸಂತೋಷ ಪಡಿಸುವ ಕಾರ್ಯ ಸಂಪ್ಯ ದೇವಸ್ಥಾನದಲ್ಲಿ ನಡೆಯುತ್ತಿದೆ. ವೈದ್ಯಕೀಯ ಶಿಬಿರದ ಮೂಲಕ ಜನರಿಗೆ ಆವಶ್ಯಕವಾದ ಚಿಕಿತ್ಸೆಗಳನ್ನು ಆಯೋಜಿಸಿಕೊಂಡು ಪ್ರತಿಯೊಬ್ಬರನ್ನು ಸಂತೋಷ ಪಡಿಸಲಾಗುತ್ತಿದೆ ಎಂದರು.
ದೇವಸ್ಥಾನದಲ್ಲಿ ವೈದ್ಯಕೀಯ ಶಿಬಿರ ಚಿಂತನೆ ಅರ್ಥಪೂರ್ಣವಾದುದು-ಮಾಣಿಲ ಶ್ರೀ:
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿಯವರು ಮಾತಮಾಡಿ, ದೇವಸ್ಥಾನದ ಮೂಲಕ ವೈದ್ಯಕೀಯ ಶಿಬಿರದ ನಡೆಸುವ ಚಿಂತನೆ ಬಹಳಷ್ಟು ಅರ್ಥಪೂರ್ಣವಾದುದು. ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆಗಳನ್ನು ನೀಡಿದರೂ ರೋಗಿಗಳನ್ನು ತೃಪ್ತಿಪಡಿಸಿವುದು ಕಷ್ಟದ ಕೆಲಸ. ದೇವರ ಮೇಲಿನ ಭಾರ, ವೈದ್ಯರ ಮೇಲಿನ ನಂಬಿಕ ಮುಖ್ಯ. ವೈದ್ಯರು ನೀಡುವ ಔಷಧಿ ೬೦ ಶೇಕಡವಾದರೆ ಉಳಿದ ೬೦ಶೇಕಡ ಅವರು ಹೇಳುವ ಧೈರ್ಯದ ಮಾತಿನಲ್ಲಿ ವಾಸಿಯಾಗುತ್ತದೆ. ಅಲ್ಲದೆ ವೈದ್ಯರು ನೀಡುವ ಸಲಹೆ, ಸಂದೇಶವನ್ನು ಪಾಲನೆ ಮಾಡಿದಾಗ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದರು. ವಿಕೃತ ಮನೋಭಾವ, ಯಾಂತ್ರಿಕ ಬದುಕಿನ ಸೋಗು, ಬದುಕಿನ ದುರಾಸೆಯಿಂದ ಇಂದು ಆರೋಗ್ಯದಲ್ಲಿ ವೈಪರೀತ್ಯ ಕಾಣುತ್ತಿದ್ದೇವೆ. ವೈದ್ಯಕೀಯ ಶಿಬಿರದಷ್ಟೇ, ಆರೋಗ್ಯ ಸಂರಕ್ಷಣೆಯ ಮಾಹಿತಿ ಶಿಬಿರಗಳು ಆವಶ್ಯಕವಾಗಿದೆ. ಆಸ್ಪತ್ರೆ ನಡೆಸಿ, ರೋಗಿಗಳನ್ನು ನೋಡಿಕೊಳ್ಳುವ ಸಂಕಷ್ಟದ ಸಮಯದಲ್ಲಿಯೂ ಒಂದು ವರ್ಷ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಉಚತ ಸೇವೆ ನೀಡುವ ಮೂಲಕ ಅಚ್ಚುಕಟ್ಟಾಗಿ ನಡೆಯುತ್ತಿರುವುದನ್ನು ಶ್ಲಾಘಿಸಿದರು.

ಶಿಬಿರ ಶಾಶ್ವತವಾಗಿ ನಡೆಯಲಿ-ಡಾ.ಅಶೋಕ್ ಪಡಿವಾಳ್:

ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಡಾ. ಅಶೋಕ್ ಪಡಿವಾಳ್ ಮಾತನಾಡಿ, ದೇವರ ಭಕ್ತರಿಗಾಗಿ ಪ್ರಾರಂಭಿಸಿರುವ ವೈದ್ಯಕೀಯ ಶಿಬಿರವು ನಿರಂತರವಾಗಿ ನಡೆದು ಶಾಶ್ವತವಾಗಿ ಎಲ್ಲರಿಗೂ ಚಿಕಿತ್ಸೆ ದೊರೆಯುವಂತಾಗಲಿ ಎಂದರು. ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎಂದು ಹೇಳಲಾಗುತ್ತಿದೆ. ಎಲ್ಲವೂ ಶ್ರೀಹರಿ ಕೃಪೆಯಿಂದ ನಡೆಯುತ್ತಿದೆ. ಇಲ್ಲಿ ನಾವೆಲ್ಲ ನಿಮಿತ್ತ ಮಾತ್ರ. ವೈದ್ಯರು ತನ್ನಿಂದಾಗುವ ಕರ್ತವ್ಯ ನಿರ್ವಹಿಸುತ್ತಾರೆ. ವೈದ್ಯರಲ್ಲಿ ನಂಬಿಕೆ ಮುಖ್ಯವಾಗಿರಬೇಕು. ವೈದ್ಯರ ಮೇಲೆ ಆರೋಪ ಮಾಡಬಾರದು. ಸಂಪ್ಯದ ಶಿಬಿರವು ಶಾಶ್ವತವಾಗಿ ನಡೆದು ಚಾರಿಟಿ ಆಸ್ಪತ್ರೆಯಾಗಿ ಬೆಳೆಯಲಿ ಎಂದ ಹೇಳಿದರು.

ಸಂಪ್ಯ ಸೇವಾ ಕಾರ್ಯ ರಾಜ್ಯಕ್ಕೆ ಮಾದರಿ-ಸಂಜೀವ ಮಠಂದೂರು:

ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇವಸ್ಥಾನದಲ್ಲಿ ಧಾರ್ಮಿಕ ಸೇವೆಯ ಜೊತೆಗೆ ಆರೋಗ್ಯ ಸೇವೆ ನಡೆಸಬಹುದು ಎಂಬುದನ್ನು ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದವರು ಸಾಧಿಸಿದ್ದಾರೆ. ಮಾನಸಿಕ ಹಾಗೂ ದೈಹಿಕ ಸೇವೆಯನ್ನು ಏಕಕಾಲದಲ್ಲಿ ದೇವಸ್ಥಾನದ ಮೂಲಕ ತೋರಿಸಿಕೊಡುವ ಮೂಲಕ ಸಂಪ್ಯ ದೇವಸ್ಥಾನದ ವ್ಯವಸ್ಥಾಪಾನಾ ಸಮಿತಿಯವರು ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಿದ್ದಾರೆ. ದೇವಸ್ಥಾನದಲ್ಲಿ ಒಂದು ವರ್ಷದಿಂದ ನಿರಂತರ ಸೇವೆ ಜನರು ಪಡೆಯುತ್ತಿದ್ದು ದೇವರ ಮೇಲೆ ಇಟ್ಟಿರುವ ನಂಬಿಕೆಯಂತೆ ವೈದ್ಯರಲ್ಲಿಯೂ ನಂಬಿಕೆ ಇಡುವಂತಾಗಿದೆ. ವೈದ್ಯರ ಮೇಲಿನ ನಂಬಿಕೆಯಿಂದಾಗಿ ಜನರ ನೆಮ್ಮದಿ ಸಮೃದ್ಧಿ ವೃದ್ಧಿಯಾಗುವ ಕೆಲಸ ಸಂಪ್ಯ ದೇವಸ್ಥಾನದ ಮೂಲಕ ನಡೆದಿದೆ ಎಂದ ಅವರು ದೇವಸ್ಥಾನದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನಕ್ಕೆ ರೂ.೧೦ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸಭಾ ಭವನಕ್ಕೆ ರೂ.೨೫ಲಕ್ಷ ಅನುದಾನ-ತಿಮ್ಮಪ್ಪ ಶೆಟ್ಟಿ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸಮಾಜಮುಖಿ, ಎಲ್ಲರಿಗೂ ಮಾದರಿ ಕಾರ್ಯಕ್ರತಮವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ನಡೆದು ಅದಕ್ಕೆ ಸರಕಾರದಿಂದ ಸಹಕಾರ ದೊರೆಯಬೇಕು. ನೂತನ ಸಭಾಭವನಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.೨೫ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸುರೇಶ್ ಪುತ್ತೂರಾಯರವೇ ಶಾಶ್ವತ ಅಧ್ಯಕ್ಷರಾಗಿ ಮುಂದುವರಿಯಲಿ-ರವೀಂದ್ರ ಶೆಟ್ಟಿ:

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯರವರಲ್ಲಿ ಉತ್ತಮ ಸಾಮಾಜಿಕ ಕಳಕಳಿಯಿದ್ದು ಅವರೇ ದೇವಸ್ಥಾನದ ಶಾಶ್ವತ ಅಧ್ಯಕ್ಷರಾಗಿ ಮುಂದುವರಿಯಬೇಕು. ಸರಕಾರ ಯಾವುದೇ ಬರಲಿ ಅಧ್ಯಕ್ಷರಾಗಿ ಅವರೇ ಮುಂದುವರಿಯಬೇಕು. ದೇವರ ಅನುಗ್ರಹ ಹಾಗೂ ಭಕ್ತರ ಸಹಕಾರ ಅವರಿಗೆ ದೊರೆಯಲಿದೆ ಎಂದರು.

ಯೋಜನೆಗಳ ಮಾಹಿತಿ, ನೋಂದಾವಣೆ ಆಯೋಜಿಸಬೇಕು-ಡಾ.ಗೋಪಿನಾಥ ಪೈ:

ಹಿರಿಯ ವೈದ್ಯ ಡಾ.ಗೋಪಿನಾಥ ಪೈಯವರು ಮಾತನಾಡಿ, ಜನರ ಆರೋಗ್ಯ ರಕ್ಷಣೆಯಲ್ಲಿ ಶಿಬಿರದ ಜೊತೆಗೆ ಸರಕಾರದ ಯೋಜನೆಗಳ ಮಾಹಿತಿ ನೀಡುವುದು ಬಹುಮುಖ್ಯವಾಗಿದೆ. ಹೀಗಾಗಿ ಉಚಿತ ವೈದ್ಯಕೀಯ ಶಿಬಿರದ ಜೊತೆಗೆ ಆಯುಷ್ಮಾನ್, ಯಶಸ್ವಿನಿ ಸೇರಿದಂತೆ ಇತರ ಯೋಜನೆಗಳ ಮಾಹಿತಿ ಹಾಗೂ ನೊಂದಾವಣೆಗಳನ್ನು ಆಯೋಜಿಸಿಕೊಳ್ಳಬೇಕು ಎಂದು ಹೇಳಿದರು.

ಎಲ್ಲರ ಸಹಕಾರದಿಂದ ಶಿಬಿರ ಯಶಸ್ವಿ-ಡಾ.ಸುರೇಶ್ ಪುತ್ತೂರಾಯ:
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಧಾರ್ಮಿಕ ಕೇಂದ್ರಗಳಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಬೇಕು ಎಂಬ ಉದ್ದೇಶದಿಂದ ವೈದ್ಯನಾಗಿ ವೈದ್ಯಕೀಯ ಶಿಬಿರ ಆಯೋಜಿಸುವ ಯೋಚನೆ ಬಂದಿದೆ. ಈ ಯೋಚನೆಗೆ ಸಾಕಷ್ಟು ವೈದ್ಯರು, ಔಷಧಿ ಕಂಪನಿಗಳು ಲ್ಯಾಬೋರೇಟರಿ, ಇಲ್ಲಿನ ಎಲ್ಲರ ಸಹಕಾರದಿಂದ ಯಶಸಿಯಾಗಿ ನಡೆಯುತ್ತಿದೆ. ಶಿಬಿರದ ಯಶಸ್ವಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ಸಾಮಾಜಿಕ ಕಳಕಲಿಯಿಂದ ಶಿಬಿರ-ಅರುಣ್ ಕುಮಾರ್ ಪುತ್ತಿಲ:
ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಕಳಕಲಿಯೊಂದಿಗೆ ವೈದ್ಯಕೀಯ ಶಿಬಿರವನ್ನು ಪ್ರಾರಂಭಿಸಿ ಕಳೆದ ಒಂದು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಶಿಬಿರದಲ್ಲಿ ಎಲ್ಲಾ ವೈದ್ಯರುಗಳು ಸೇವೆ ನೀಡುವ ಮೂಲಕ ಬಡವರ ಕಣ್ಣೀರು ಒರೆಸುವ ಮಾದರಿ ಕೆಲಸವಾಗುತ್ತಿದೆ. ನಿರಂತರ ಶಿಬಿದರ ಮೂಲಕ ರಾಜ್ಯ, ರಾಷ್ಟ್ರಕ್ಕೆ ಸಂದೇಶ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಶಿಬಿರಗಳನ್ನು ಆಯೋಜಿಸಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ ಎಂದರು.

ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಕ್ರಂಪಾಡಿ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬರಕ್ಕೆ ದೇಣಿಗೆ:
ಶಿವಳ್ಳಿ ಸಂಪದ ಬೊಳುವಾರು ವಲಯ, ಸಂಪ್ಯ ನವಚೇತನಾ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ ಶಿಬರಕ್ಕೆ ದೇಣಿಗೆಯ ಮೊತ್ತವನ್ನು ವ್ಯವಸ್ಥಾನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಹಾಗೂ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತರವರರಿಗೆ ಹಸ್ತಾಂತರಿಸಿದರು.

ಸನ್ಮಾನ:
ದೇವಸ್ಥಾನದಲ್ಲಿ ವೈದ್ಯಕೀಯ ಶಿಬಿರದ ಚಿಂತನೆಯೊಂದಿಗೆ ಯಶಸ್ವಿಯಾಗಿ ಶಿಬಿರವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಡಾ.ಸುರೇಶ್ ಪುತ್ತೂರಾಯರವರನ್ನು ಆರೋಗ್ಯ ರಕ್ಷಾ ಸಮಿತಿ ಹಾಗೂ ಶಿವಳ್ಳಿ ಸಂಪದದ ವತಿಯಿಂದ ಸನ್ಮಾನಿಸಲಾಯಿತು.

ಅಕ್ಕಿ, ಪುಸ್ತಕ ವಿತರಣೆ:
ದಾಣಿಗಳು ಕೊಡುಗೆಯಾಗಿ ನೀಡಿದ ಅಕ್ಕಿಯನ್ನು ಅರ್ಹ ಫಲಾನುಭವಿಗಳಿಗೆ ಹಾಗೂ ಪುಸ್ತಕವನ್ನು ಸಂಪ್ಯ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮೈಥಿಲಿ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿ, ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್ ವಂದಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ವಿನ್ಯಾಸ್ ಯು.ಎಸ್., ಉತ್ಸವ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್ ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here