ಆಟೋ ಎಲ್‌ಪಿಜಿ ಗ್ರಾಹಕರಿಗೆ ಸಂತಸದ ಸುದ್ದಿ ; ರೂ.300 ಎಲ್‌ಪಿಜಿ ತುಂಬಿಸಿ ಗೆಲ್ಲಿರಿ ರೂ.300 ರ ಎಲ್‌ಪಿಜಿ ಉಚಿತ

0

ಪುತ್ತೂರು: ಯುಗಾದಿ ಉತ್ಸವದ ಸಂಭ್ರಮದಲ್ಲಿ ಟೋಟಲ್ ಎನರ್ಜಿಸ್‌ರವರು ಆಟೋ ಎಲ್‌ಪಿಜಿ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ಕೊಡುತ್ತಿದ್ದಾರೆ. ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಷನ್‌ನಿಂದ ತಮ್ಮ ಆಟೋಗಳಿಗೆ ಎಲ್‌ಪಿಜಿ ಗ್ಯಾಸ್ ತುಂಬಿಸಿದರೆ ರೂ.300 ಮೌಲ್ಯದ ಎಲ್‌ಪಿಜಿಯನ್ನು ಉಚಿತವಾಗಿ ಪಡೆಯುವ ಅವಕಾಶವಿದೆ.

ಆಟೋ ಚಾಲಕರು ಪ್ರತಿ ಬಾರಿ ರೂ.300 ರ ಆಟೋ ಎಲ್‌ಪಿಜಿಯನ್ನು ಟೋಟಲ್ ಎನರ್ಜಿಸ್‌ನ ಗ್ಯಾಸ್ ಸ್ಟೇಷನ್‌ನಲ್ಲಿ ತುಂಬಿಸಿದರೆ ಮತ್ತು ಪ್ರತಿ ಫಿಲ್ಲಿಂಗ್‌ಗೆ ಒಂದು ಕೂಪನ್ ಕೊಡಲಾಗುತ್ತದೆ. ಪ್ರತಿ ವಾರ ಈ ಕೂಪನ್‌ನ ಲಕ್ಕಿ ಡ್ರಾ ನಡೆಯುತ್ತದೆ. ಡ್ರಾದಲ್ಲಿ ವಿಜೇತರಾದವರಿಗೆ ರೂ.300 ಮೌಲ್ಯದ ಎಲ್‌ಪಿಜಿಯನ್ನು ಉಚಿತವಾಗಿ ಗೆಲ್ಲುವ ಅವಕಾಶ ಇದೆ. ಆಟೋ ಚಾಲಕರು ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದಾಗಿದ್ದು ತಮ್ಮ ಆಟೋಗಳಿಗೆ ಟೋಟಲ್ ಎನರ್ಜಿಸ್‌ನವರ ಕೊಂಕಣ್ ಗ್ಯಾಸ್ ಸ್ಟೇಷನ್ ನೆಹರು ನಗರ ಮತ್ತು ದರ್ಬೆಯಲ್ಲಿ ಎಲ್‌ಪಿಜಿ ತುಂಬಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದಾಗಿದೆ.

ಪ್ರತಿ ವಾರ ಲಕ್ಕಿ ಡ್ರಾ
ಈ ಕೊಡುಗೆ ಮಾ.08 ರಿಂದ ಆರಂಭಗೊಂಡು ಎ.6 ರವರೇಗೆ ಇರಲಿದೆ. ಟೋಟಲ್ ಎನರ್ಜಿಸ್‌ನ ಕೊಂಕಣ್ ಗ್ಯಾಸ್ ಸ್ಟೇಷನ್ ಬೆಳಿಗ್ಗೆ 6 ರಿಂದ ರಾತ್ರಿ 10 ರ ತನಕ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.9481377201 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here