ಪುತ್ತೂರು: ಮಂಗಳೂರಿನ Father Muller College of Allied Health Sciencesನ ವಿದ್ಯಾರ್ಥಿನಿ ಹರ್ಷಿತಾ ಎನ್. ಜೋಗಿ ಅವರು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ Master’s in Hospital Administration (MHA) ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ. ಇವರು ಬದಿಯಡ್ಕದ ಭಾಸ್ಕರ ಜೋಗಿ ಮತ್ತು ರಾಜೇಶ್ವರಿಯವರ ಪುತ್ರಿಯಾಗಿದ್ದು ಪುತ್ತೂರಿನ ವೈಷ್ಣವಿ ನಾಟ್ಯಾಲಯದ ಯೋಗೀಶ್ವರಿ ಜಯಪ್ರಕಾಶ್ ರವರ ಶಿಷ್ಯೆಯಾಗಿದ್ದಾರೆ. ಹರ್ಷಿತಾ ಅವರು ಭರತನಾಟ್ಯದಲ್ಲಿ ವಿದುಷಿ ಪದವಿ ಪಡದಿದ್ದಾರೆ.