ಪತ್ರಿಕಾ, ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಧರ್ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಪತ್ರಿಕಾ ವಿತರಣಾ ಮತ್ತು ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಧರ್(60ವ)ರವರು ಇಲ್ಲಿನ ಜ್ಞಾನತರಂಗಿಣಿ ಪತ್ರಿಕಾ ವಿತರಣೆ ಅಂಗಡಿಯ ಸಮೀಪದ ಕೊಠಡಿಯೊಂದರಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಮಾ.11ರಂದು ಸಂಜೆ ಬೆಳಕಿಗೆ ಬಂದಿದೆ.

ಮೂಲತಃ ಬಲ್ನಾಡು ನಿವಾಸಿಯಾಗಿರುವ ಶ್ರೀಧರ್ ಅವರು ಹಲವು ವರ್ಷಗಳ ಹಿಂದೆ ಪುತ್ತೂರಿನ ಪ್ರತಿಷ್ಠಿತ ಜವುಳಿ ಸಂಸ್ಥೆ ಅಲ್ಲಿಂದ ಉಡುಪಿಯಲ್ಲಿನ ಸಂಸ್ಥೆ ಬಳಿಕ ಪುತ್ತೂರು ಕೆಮ್ಮಿಂಜೆ ಸಮೀಪದ ಭಾರತ್ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಜ್ಞಾನತರಂಗಿಣಿ ಸಂಸ್ಥೆಯಲ್ಲಿ ಬೆಳಿಗ್ಗೆ ಅವರು ಪತ್ರಿಕೆ ವಿತರಣೆ ಕಾರ್ಯ ನಿರ್ವಹಿಸುತ್ತಿದ್ದ ಅವರು ಮಾ.11ರಂದು ಬಂದಿರಲಿಲ್ಲ. ಸಂಜೆ ವೇಳೆ ಅವರು ಸಂಸ್ಥೆಯ ಪಕ್ಕದಲ್ಲಿರುವ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here