ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಸುದ್ದಿ ಪತ್ರಿಕೆ, ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಸ್ಟುಡಿಯೋಗಳಿವೆ. ಡ್ರೋಣ್ ಮತ್ತು ನೇರಪ್ರಸಾರದ ವ್ಯವಸ್ಥೆಯೂ ಇದೆ. ಬಂಟ್ವಾಳ, ಕಡಬ, ಮಂಗಳೂರುಗಳಲ್ಲಿ ಕಚೇರಿಗಳಿದ್ದು ಅಲ್ಲಿ ಸುದ್ದಿ ವೆಬ್ಸೈಟ್ ಮತ್ತು ಯೂಟ್ಯೂಬ್ ಚಾನೆಲ್ಗಳಿವೆ. ಹಲವಾರು ವರ್ಷಗಳ ಹಿಂದೆ ಬೆಂಗಳೂರು ಮತ್ತು ಇತರ ಕಡೆಗಳಲ್ಲಿರುವ ಪತ್ರಿಕೆಗಳಿಗೆ, ವೆಬ್ಸೈಟ್ ಮತ್ತು ಚಾನೆಲ್ಗಳಿಗೆ ಬೇಕಾದ ವರದಿ ಫೋಟೊ, ವಿಡಿಯೋ ಹಾಗೂ ಸ್ಟೋರಿಗಳನ್ನು ಸಂಗ್ರಹಿಸಿ ನೀಡುವ ಉದ್ದೇಶ ಇಟ್ಟುಕೊಂಡು ಆ ಬಗ್ಗೆ ಪ್ರಯತ್ನ ಕೂಡಾ ಮಾಡಿದ್ದೇವೆ. ಆದರೆ ಅಂದು ಮತ್ತು ನಂತರ ಕೊರೋನಾ ಮತ್ತಿತರ ಕಾರಣಾಂತರಗಳಿಂದ ಹಾಗೂ ಸಾಮಾಜಿಕ ಆಂದೋಲನಗಳಲ್ಲಿ ತೊಡಗಿಸಿಕೊಂಡದ್ದರಿಂದ ಉಂಟಾದ ಸಮಯದ ಅಭಾವದಿಂದ ಮುಂದುವರಿಸಲಾಗಲಿಲ್ಲ. ಮತ್ತು ಅದಕ್ಕೆ ನಮ್ಮ ಹಲವಾರು ಸಮಯ ತೊಡಗಿಸಿಕೊಡಬೇಕಾಗಿ ಬಂದುದು ಕಾರಣಗಳಾಗಿರಬಹುದು.
ಆದರೆ ಈಗ ವೆಬ್ಸೈಟ್ ಮತ್ತು ಯೂಟ್ಯೂಬ್ಗಳು ಬೂಮ್ ಆಗಿದೆ. ಎಲ್ಲಾ ಕಡೆಯೂ ಹೆಚ್ಚು ವೆಬ್ಸೈಟ್ ಮತ್ತು ಯೂಟ್ಯೂಬ್ ಚಾನೆಲ್ಗಳಿವೆ. ಎಲ್ಲರಿಗೂ ವರದಿ, ಫೋಟೊ, ವಿಡಿಯೋ ಬೇಕಾಗಿದೆ. ಅದನ್ನು ಕೊಡುವವರೂ ಇದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ವಿಶ್ವಾಸಪೂರ್ಣ (ಅಥಂಟಿಕ್) ಮತ್ತು ವೇಗವಾಗಿ ಅವರಿಗೆ ದೊರಕುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಈ ವಿಧಾನಸಭಾ ಚುನಾವಣೆಗೂ ಮೊದಲು ಈ ಹಿಂದಿನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದೇವೆ. ನಮ್ಮ ನೆಟ್ ವರ್ಕ್ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಇರುವುದರಿಂದ ಮತ್ತು ಸುದ್ದಿ ಬಿಡುಗಡೆ – ಮಾಧ್ಯಮ ವಿಶ್ವಾಸಪೂರ್ಣ ಎಂಬ ನಂಬಿಕೆ ಇರುವುದರಿಂದ ಅದನ್ನು ಬೇಕಾದವರಿಗೆ ಬೇಕಾದ ರೂಪದಲ್ಲಿ ಕೊಡಬಹುದೆಂಬ ಯೋಚನೆ ನಮ್ಮದು. ಅದಕ್ಕಾಗಿ ಬೇಡಿಕೆಯುಳ್ಳ ಪತ್ರಿಕೆ, ವೆಬ್ಸೈಟ್, ಚಾನೆಲ್ಗಳನ್ನು ಸಂಪರ್ಕಿಸಲಿದ್ದೇವೆ. ದ.ಕ. ಜಿಲ್ಲೆಯ ಅಲ್ಲಲ್ಲಿ ಪ್ರತಿನಿಧಿಗಳನ್ನು, ವರದಿಗಾರರನ್ನು ನೇಮಿಸಲಿದ್ದೇವೆ. ಈ ಬಗ್ಗೆ ಆಸಕ್ತಿ ಇರುವವರನ್ನು, ಮಾಧ್ಯಮದವರನ್ನು ನಮ್ಮ ಯೋಜನೆಗೆ ಸೇರಿಸಿಕೊಳ್ಳಲಿದ್ದೇವೆ. ಪ್ರತಿನಿಧಿಗಳು ಮತ್ತು ವರದಿಗಾರರಾಗಿ ಸೇರಿಕೊಳ್ಳಲು ಬಯಸುವವರು ವರದಿ, ಫೋಟೊ, ವಿಡಿಯೋ ಮಾಧ್ಯಮದವರು ಆಯಾ ತಾಲೂಕಿನ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಪುತ್ತೂರು : ಸುದ್ದಿ ಸೆಂಟರ್, ಹಳೆಬಜಾರ್ ಪೋಸ್ಟಾಫೀಸ್ ಬಳಿ, ಪುತ್ತೂರು ಫೋನ್ : 08251-233949, 7829668949
ಸುಳ್ಯ : ಶ್ರೀಹರಿ ವಾಣಿಜ್ಯ ಸಂಕೀರ್ಣ, ಸುಳ್ಯ ಫೋನ್ : 08257&232600
ಬೆಳ್ತಂಗಡಿ : ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣ, ಬಸ್ಟೇಂಡ್ ಬಳಿ, ಬೆಳ್ತಂಗಡಿ ಫೋನ್ : 08256-&232911, 9620372412