ನಿಡ್ಪಳ್ಳಿ; ನಿಡ್ಪಳ್ಳಿ ಗುತ್ತು ಚಾವಡಿಯಲ್ಲಿ ಮಾ.11 ಮತ್ತು12 ರಂದು ಧರ್ಮ ನೇಮ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಮಾ.11 ರಂದು ಬೆಳಿಗ್ಗೆ ಗಂಟೆ ಗಣಪತಿ ಹವನ, ಶುದ್ದಿ ಕಲಶ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆಯಿತು.ಮದ್ಯಾಹ್ನ ಗುತ್ತು ಮನೆಯಲ್ಲಿ ಮಾಲ ಕಾರ್ಯ ನಡೆದು ನಿಡ್ಪಳ್ಳಿ ಸಾರಾಳ ಪಟ್ಟದ ದೈವಗಳ ಚಾಕ್ರಿ ಬಳೆಯನ್ನು ದೈವ ನರ್ತಕ ಬಾಳಿಲ ಶೇಷಪ್ಪ ಪರವರಿಗೆ ಪ್ರದಾನ ಮಾಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ.
ಸಂಜೆ ಪಲ್ಲಪೂಜೆ,ರಾತ್ರಿ ಶ್ರೀ ಶಾಂತದುರ್ಗಾ ದವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ನಂತರ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ತರಲಾಯಿತು. ನಂತರ ಗುತ್ತು ಚಾವಡಿಯಿಂದ ಮಲರಾಯ ಮತ್ತು ಪಿಲಿಭೂತ ದೈವಗಳ ಭಂಡಾರ ಇಳಿಸಲಾಯಿತು.ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪಿಲಿಭೂತ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು.
ಮಾ.12 ರಂದು ಬೆಳಿಗ್ಗೆ ಮಲರಾಯ ದೈವದ ನೇಮ ನಡೆದು ಪ್ರಸಾದ ವಿತರಣೆ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಧೂಮಾವತಿ ದೈವದ ನೇಮ, ಅಂಗಣ ಪಂಜುರ್ಲಿ ದೈವದ ಪ್ರಸಾದ ವಿತರಣೆ ನಡೆಯಿತು. ವಸಂತಿ ಜೆ.ಆರಿಗ, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಪ್ರವೀಣ ಎನ್.ಆರಿಗ ನಿಡ್ಪಳ್ಳಿಗುತ್ತು ಹಾಗೂ ಕುಟುಂಬಸ್ಥರು ಮತ್ತು ಊರ ಪರವೂರ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.