5 ವರ್ಷಗಳ ಹಿಂದೆ ಕೋಡಿಂಬಾಡಿಯಲ್ಲಿ‌ ನಡೆದ ಅಡಿಕೆ ದರೋಡೆ ಪ್ರಕರಣ – ವಾರಂಟ್ ಆರೋಪಿ‌ ಬಂಧನ

0

ಪುತ್ತೂರು: 5. ವರ್ಷಗಳ ಹಿಂದೆ ಕೋಡಿಂಬಾಡಿಯಲ್ಲಿ ನಡೆದ ಅಡಿಕೆ ದರೋಡೆ ಪ್ರಕರಣಕ್ಕೆ ಸಂಬಂಧಿ ಕಳೆದ 3 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಮಂದಾರ್ತಿ ಕಡೂರ್ ಬಾಯರುಬೆಟ್ಟು ನಿವಾಸಿ ವಿಜಯ ಶೆಟ್ಟಿ ಎಂಬವರು ಬಂಧಿತ ಆರೋಪಿ. 2018 ರಲ್ಲಿ ಕೋಡಿಂಬಾಡಿಯಲ್ಲಿ ಅಡಿಕೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಜಯ ಶೆಟ್ಟಿ ಬಂಧನವಾಗಿತ್ತು. ಬಳಿಕ ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿಗೆ ವಾರಂಟ್ ಜಾರಿ ಮಾಡಿತ್ತು. ದ.ಕ ಜಿಲ್ಲಾ ಎಸ್ಪಿ ಮತ್ತು ಡಿವೈಎಸ್ಪಿಯವರ ಮಾರ್ಗದರ್ಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಸುನಿಲ್ ಕುಮಾರ್ ಮತ್ತು ಉಪನಿರೀಕ್ಷಕ ಶ್ರೀಕಾಂತ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ ಎ.ಎಸ್.ಐ ಚಂದ್ರ, ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ ಮತ್ತು ಕಾನ್ ಸ್ಟೇಬಲ್ ಕುಮಾರ್ ರವರುಗಳು ಮಾ.೧೩ ರಂದು ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here