ಮೈಂದಡ್ಕ ಅಂಗನವಾಡಿ ಕೇಂದ್ರ ಉದ್ಘಾಟನೆ

0

ಉಪ್ಪಿನಂಗಡಿ: ೩೪ ನೆಕ್ಕಿಲಾಡಿಯ ಗ್ರಾ.ಪಂ.ನ ಮೈಂದಡ್ಕದಲ್ಲಿ ನೂತನವಾಗಿ ಆರಂಭಿಸಲಾದ ಅಂಗನವಾಡಿ ಕೇಂದ್ರವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.


ಈ ಪರಿಸರದ ಮಕ್ಕಳ ಅನುಕೂಲಕ್ಕಾಗಿ ಮೈಂದಡ್ಕ ಬಳಿಯ ಚೀಮುಳ್ಳುವಿನ ರಾಮಚಂದ್ರ ನಾಯ್ಕ ಎಂಬವರ ಮನೆಯಲ್ಲಿ ಈಗ ಅಂಗನವಾಡಿ ಕೇಂದ್ರವನ್ನು ಆರಂಭಿಸಲಾಗಿದ್ದು, ಮುಂದಕ್ಕೆ ಮೈಂದಡ್ಕದ ಬಳಿ ಸರಕಾರದ ಅನುದಾನದಲ್ಲಿ ಅಂಗನವಾಡಿ ಕೇಂದ್ರವನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.


ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ, ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಉಪಾಧ್ಯಕ್ಷೆ ಸ್ವಪ್ನ ಜೀವನ್, ಸದಸ್ಯರಾದ ವಿಜಯಕುಮಾರ್, ಹರೀಶ್ ಡಿ., ಸುಜಾತ ರೈ ಅಲಿಮಾರ್, ಗೀತಾ ವಾಸುಗೌಡ, ವೇದಾವತಿ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಜಾತ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಬೇಬಿ, ಜಯಮ್ಮ, ನಮ್ಮೂರು- ನಮ್ಮವರು ಅಧ್ಯಕ್ಷ ಪುರುಷೋತ್ತಮ ನಾಯ್ಕ, ನೆಕ್ಕಿಲಾಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜೀವ ನಾಯ್ಕ, ಸ್ಥಳೀಯರಾದ ಪ್ರದೀಪ್ ತಾಳೆಹಿತ್ಲು, ಜಾನ್ ಕೆನ್ಯೂಟ್, ಪ್ರಕಾಶ್ ಗೌಡ ಆದರ್ಶನಗರ, ಸದಾನಂದ ನೆಕ್ಕಿಲಾಡಿ, ಅರ್ಜುನ್, ದಿನೇಶ್ ನಾಯಕ್, ಪ್ರವೀಣ್ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.


ಈ ಸಂದರ್ಭ ಶಾಸಕ ಸಂಜೀವ ಮಠಂದೂರು, ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರನ್ನು ಊರವರ ಪರವಾಗಿ ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ಹರೀಶ್ ಡಿ. ಅವರನ್ನು ಗ್ರಾ.ಪಂ. ವತಿಯಿಂದ ಸನ್ಮಾನಿಲಾಯಿತು.

LEAVE A REPLY

Please enter your comment!
Please enter your name here