ಪಡುಮಲೆ ಜುಮಾ ಮಸ್ಜಿದ್ (ಪಮ್ಮಲ) ಆಂಡ್ ನೇರ್ಚೆ ಧಾರ್ಮಿಕ ಉಪನ್ಯಾಸ, ಕೂಟು ಪ್ರಾರ್ಥನೆ -ದ್ವಜಾರೋಹಣದ ಮೂಲಕ ಕಾಯಕ್ರಮಕ್ಕೆ ಚಾಲನೆ

0

ಪುತ್ತೂರು; ಇತಿಹಾಸ ಪ್ರಸಿದ್ದ ಪಡುಮಲೆ ಜುಮಾ ಮಸ್ಜಿದ್ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಂಡ್‌ನೇರ್ಚೆ ಮತ್ತು ಕೂಟು ಪ್ರಾರ್ಥನೆ ಕಾರ್ಯಕ್ರಮ ಮಾ. 17,18 ಮತ್ತು 19 ರಿಂದ ಮಸೀದಿ ವಠಾರದಲ್ಲಿ ನಡೆಯಲಿದೆ.

ಮಾ. 17 ರಂದು ಜುಮಾ ನಮಾಜಿನ ಬಳಿಕ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ರವರು ದ್ವಜಾರೋಹಣ ಮಾಡುವ ಮೂಲಕ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಡುಮಲೆ ಜಮಾತ್ ಖತೀಬರಾದ ಶಂಸುದ್ದೀನ್ ದಾರಿಮಿ, ಮುಅಲ್ಲಿಂ ಶಾಫಿ ಅಝ್‌ಹರಿ, ಜಮಾತ್ ಕಮಿಟಿ ಉಪಾಧ್ಯಕ್ಷರಾದ ಫಕ್ರುದ್ದೀನ್‌ಕೋಶಾಧಿಕಾರಿ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿಗಳಾದ ಅಲಿ ಹಾಜಿ, ಅಲಿಕುಂಞಿ ಕಾವುಂಜ, ಮಜೀದ್ ಮಿನಾವು, ಬಿ ಟಿ ಹಸೈನಾರ್, ಆಲಿಕುಂಞಿ ಡೆಂಬಳೆ, ಆದಂ ಹಾಜಿ ಡೆಂಬಾಳೆ, ಮತ್ತು ಜಮಾತರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here