ಉಪ್ಪಿನಂಗಡಿ: ಕಂಬಳ ಸಮಿತಿಯಿಂದ ಸ್ವಚ್ಛತಾ ಕಾರ್ಯ

0

ಉಪ್ಪಿನಂಗಡಿ: ಕಂಬಳವನ್ನು ಯಶಸ್ವಿಯಾಗಿ ಆಯೋಜಿಸುವುದಲ್ಲದೆ, ಆ ಬಳಿಕ ಪರಿಸರದ ಸ್ವಚ್ಛತೆ ಕಡೆಗೂ ಆದ್ಯತೆ ನೀಡುವ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯು ಈ ಬಾರಿಯು ಕಂಬಳ ನಡೆದ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.


ಎರಡು ದಿನಗಳ ಕಾಲ ನಡೆದ ಇಲ್ಲಿನ ಕಂಬಳ ಕೂಟದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ಪರಿಸರವಿಡೀ ಕಸಗಳು ಬಿದ್ದಿದ್ದವು. ಕಂಬಳ ಕೂಟ ಮುಗಿದ ಎರಡು ದಿನಗಳ ಬಳಿಕ ಸಮಿತಿಯವರು ಸೇರಿಕೊಂಡು ಪರಿಸರದ ಸ್ವಚ್ಛತಾ ಕಾರ್ಯ ನಡೆಸಿದರು.


ಈ ಸಂದರ್ಭ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ರಸಾದ್ ಬೊಳ್ಳಾವು, ಸಹ ಸಂಚಾಲಕ ಶಿವರಾಮ ಶೆಟ್ಟಿ ಗೋಳ್ತಮಜಲು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here