ಪುತ್ತೂರು:2023ನೇ ಸಾಲಿನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್ ಪಿ.ಜಿ)ಯಲ್ಲಿ ಕೊಳ್ತಿಗೆಯ ಪೆರ್ಲಂಪಾಡಿ ಕಟ್ಟಪುಣಿಯ ಮೇಘಾ ವಿ.ಕೆ 202ನೇ ರ್‍ಯಾಂಕ್ ಗಳಿಸಿದ್ದಾರೆ.
ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ನಡೆಸಿದ ನೀಟ್ ಪಿಜಿ ಪರೀಕ್ಷೆಗೆ ಹಾಜರಾದ ದೇಶದ ಒಟ್ಟು 2,09000 ವಿದ್ಯಾರ್ಥಿಗಳಲ್ಲಿ ಮೇಘಾ ವಿ.ಕೆ 202ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ.
ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಇವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕಟ್ಟಪುಣಿ ನಿವಾಸಿ ವೆಂಕಟ್ರಮಣ ಗೌಡ ಕೆ.ಎಸ್ ಹಾಗೂ ಲತಾ ವಿ.ಕೆ ದಂಪತಿ ಪುತ್ರಿ