ಪುತ್ತೂರು : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ನೂತನ ರಥ,ಪಲ್ಲಕ್ಕಿ ನಿರ್ಮಿಸುವ ಸಲುವಾಗಿ ಮಾ.23 ರಂದು ರಥ ನಿರ್ಮಾಣಕ್ಕೆ ವೃಕ್ಷ ಪೂಜೆಯು ನಡೆಯಿತು.
ಪ್ರಕಾಶ್ ಕುಮಾರ್ ಶೆಟ್ಟಿ ಪನ್ನೆ ಮತ್ತು ಶಾಲಿನಿ ಪಿ.ಶೆಟ್ಟಿ ಪನ್ನೆಯವರ ಜಾಗದಲ್ಲಿರುವ ಸಾಗುವಾನಿ ಮರವನ್ನು ರಥ ನಿರ್ಮಾಣಕ್ಕೆ ದಾನವಾಗಿ ನೀಡಿದ್ದು ವೃಕ್ಷ ಪೂಜೆಯನ್ನು ಪೆರುವಾಜೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೆರವೇರಿಸಿ,ಮರ ಮುಹೂರ್ತವನ್ನು ಬಾಲಕೃಷ್ಣ ಆಚಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ಜಯಪ್ರಕಾಶ್ ರೈ, ವೆಂಕಟಕೃಷ್ಣ ರಾವ್,ಜಗನ್ನಾಥ ರೈ, ಯಶೋಧ ಎ.ಎಸ್. ಹಿರಿಯರಾದ ಅಮರನಾಥ ಶೆಟ್ಟಿ , ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸುನಿಲ್ ರೈ ಪೆರುವಾಜೆ, ಪ್ರದೀಪ್ ಕುಮಾರ್ ರೈ ಪನ್ನೆ, ಜಗನ್ನಾಥ ಆಳ್ವ ಕಲ್ಲೊಣಿ, ಸುನಿಲ್ ರೈ ಪುಡ್ಕಜೆ, ಉಪವಲಯಾರಣ್ಯಾಧಿಕಾರಿ ಪ್ರಸಾದ್, ಸುಧಾನಂದ ಪೆರುವಾಜೆ, ತೇರಪ್ಪ ಮಣಿಯಣಿ ಪೆರುವಾಜೆ,ಗಿರಿಧರ ರೈ, ಜಗದೀಶ ರೈ,ಜಯರಾಮ ಪೆರುವಾಜೆ,ನೇಮು ಪರವ, ರಾಜೇಶ್ , ಸಂತೋಷ್ ಆಚಾರ್ಯ, ದೇವಸ್ಥಾನದ ಸಿಬ್ಬಂದಿ ವಸಂತ ಆಚಾರ್ಯ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.