ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಡಬ ಭಾಗಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ-ಮೀರಾ ಸಾಹೇಬ್
ಪುತ್ತೂರು: ಕಡಬ ತಾಲೂಕು ಜಾತ್ಯಾತೀತ ಜನತಾದಳ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಸುಬ್ರಹ್ಮಣ್ಯ ಐನೆಕಿದುವಿನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ ಜೆಡಿಎಸ್ ಪಕ್ಷ ಈ ನಾಡಿಗೆ ಅನಿವಾರ್ಯವಾಗಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ರೈತರ ಸಾಲ ಮಾಡಿದ್ದರು. ಕಡಬ ತಾಲೂಕು ಘೋಷಣೆ ಮಾಡಿ ಮಿನಿ ವಿಧಾನ ಸೌಧ ಕಟ್ಟಡ, ತಾ.ಪಂ ಕಟ್ಟಡ ಸೇರಿದಂತೆ ಹಲವಾರು ಯೋಜನೆಗಳನ್ನು ನಮಗೆ ಒದಗಿಸಿಕೊಟ್ಟಿದ್ದಾರೆ. ಅಲ್ಲದೇ ರೈತರ ಇನ್ನೂ ಹತ್ತು ಹಲವು ಯೋಜನೆ ಹಮ್ಮಿಕೊಂಡಿದ್ದ ಕುಮಾರಸ್ವಾಮಿಯವರು ಮುಂದಿನ ಮುಖ್ಯಮಂತ್ರಿಯಾಗುವುದು ಅನಿವಾರ್ಯ ಎಂದು ಹೇಳಿದರು.
ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಮಾತನಾಡಿ ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ಜನ ಬೆಂಬಲವಿದ್ದು ಜಿಲ್ಲೆಯಲ್ಲೂ ಜನತೆ ಜೆಡಿಎಸ್ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ದಿನೇಶ್ ಲೆಕ್ಚರರ್, ತಿಲಕ್ ಲೆಕ್ಚರರ್, ಕಾರ್ತಿಕ್ ಕೈಕಂಬ, ಮಧುಸೂದನ್ ಕಾಪಿಕ್ಕಾಡ್, ಶಶಿಧರ ಕೆದಿಲ ಮಾತನಾಡಿದರು.
ಸಭೆಯಲ್ಲಿ ಸೋಮಸುಂದರ, ತಿಲಕ್ ಎ.ಎ, ದುಗ್ಗಪ ಹೆಚ್ ನಾಯ್ಕ, ದಿನೇಶ್ ಎಂ.ಪಿ, ಜಗದೀಶ್ ಪಡ್ಪು, ಶಶಿಧರ ಕೆದಿಲ, ಜಗದೀಶ್ ಕೆ.ಎಂ, ಕೆ.ಕೆ ರವೀಂದ್ರ, ಸತೀಶ ಕೆ.ಎಂ, ದೇವಿಪ್ರಸಾದ್, ಬೆಳ್ಯಪ್ಪ ಗೌಡ ಕೆ, ಕುಶಾಲಪ್ಪ ಗೌಡ ನೆತ್ತಾರು, ಸುರೇಶ ಕೆ, ಪದ್ಮನಾಭ ಗೌಡ ಕೆದಿಲ, ಶೇಷಪ್ಪ ಅಜಲ ಕೋಟೆಬೈಲು, ದಾಮೋದರ ಕೆ, ಕಾರ್ತಿಕ್ ಗುಂಡಿಗದ್ದೆ ಷಣ್ಮುಖ ಕೆದಿಲ, ನರೇಂದ್ರ ಕೆ, ಎಂ ಮೋನಪ್ಪ, ಸಂಜೀವ ನೆತ್ತಾರು ಮೊದಲಾದವರು ಉಪಸ್ಥಿತರಿದ್ದರು. ಸೋಮಸುಂದರ ಸ್ವಾಗತಿಸಿದರು. ಜಗದೀಶ್ ಪಡ್ಪು ವಂದಿಸಿದರು.