ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಸ್ವೀಕರಿಸಿದ ಹಿರಿಯ ರಂಗಕರ್ಮಿ ಐಕೆ ಬೊಳುವಾರು

0

ಪುತ್ತೂರು: ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಐಕೆ ಬೊಳುವಾರು ಆಯ್ಕೆಯಾಗಿದ್ದು ,ಮಾ.27ರ ಬೆಳಿಗ್ಗೆ ಧಾರವಾಡ ಬಾಲವಿಕಾಸ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.


ಕಳೆದ ನಾಲ್ಕು ದಶಕಗಳಿಂದ ರಂಗಭೂಮಿಗೆ ಸಂಬಂಧಿಸಿದಂತೆ ನಟನೆ, ನಿರ್ದೇಶನ, ನಾಟಕ ರಚನೆ, ಪ್ರಕಟಣೆ, ತರಬೇತಿ, ಸಂಘಟನೆ ಮುಂತಾದ ವಿವಿಧ ರಂಗ ಕ್ಷೇತ್ರದ ವಿಭಾಗಗಳಲ್ಲಿ ನಿರಂತರವಾಗಿ ಕಾರ್ಯ ಮಾಡುತ್ತಾ ಬಂದಿರುವ ಬೊಳುವಾರರು ಮಕ್ಕಳ ರಂಗಭೂಮಿಯಲ್ಲಿ ವಿನೂತನ ಪ್ರಯೋಗ, ಪ್ರದರ್ಶನಗಳನ್ನು ನಡೆಸಿದ್ದಾರೆ.

`ರಂಗ ಅಧ್ಯಯನದ ಮೂಲಕ ನಾಡಿನ ಪ್ರಮುಖ ರಂಗಸಂಸ್ಥೆಗಳು ಹಾಗೂ ಸಂಘಟನೆಗಳೊಂದಿಗೆ ಕಾರ್ಯ ಮಾಡುತ್ತಿದ್ದಾರೆ. ಮೈಸೂರಿನ ರಂಗಾಯಣ ಹಾಗೂ ಸ್ವೀಡಿಷ್, ಐಟಿಐ ಸಹಕಾರದೊಂದಿಗೆ ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯನ್ವಯ ಮಕ್ಕಳ ನಾಟಕಗಳನ್ನು ಸಿದ್ಧಪಡಿಸಿ, ರಾಜ್ಯದ 125ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಕ್ಕಳ ನಾಟಕ ಪ್ರದರ್ಶನ ಮಾಡಿದ್ದಾರೆ. ಹೊರರಾಜ್ಯಗಳಲ್ಲೂ ಮಕ್ಕಳ ನಾಟಕಗಳು ಪ್ರದರ್ಶನಗೊಂಡಿವೆ. ರಂಗ ಕಾರ್ಯಾಗಾರ, ವಿಚಾರ ಸಂಕಿರಣ, ಲೇಖನ ಬರಹದಲ್ಲಿ ತೊಡಗಿಕೊಂಡಿದ್ದಾರೆ. ಮೂವತ್ತು ವರ್ಷಗಳಿಂದ ಇವರ ನೇತೃತ್ವದಲ್ಲಿ ‘ನಿರತನಿರಂತ’ ನಾಟಕ ಸಂಸ್ಥೆಯ ಮೂಲಕ ನಾಟಕ ಪ್ರಯೋಗಗಳನ್ನು ಮಾಡಿದ್ದಾರೆ. ಇವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ರಂಗ ಚಟುವಟಿಕೆಗಳ ಮೂಲಕ “ಮಕ್ಕಳ ರಂಗಭೂಮಿ ಕ್ಷೇತ್ರ”ವನ್ನು ಶ್ರೀಮಂತಗೊಳಿಸಿದ್ದು, ಈ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಬಾಲವಿಕಾಸ ಅಕಾಡೆಮಿ 2021-22ನೇ ಸಾಲಿನ “ಅಕಾಡೆಮಿ ಗೌರವ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.


ಸಚಿವರಾದ ಆಚಾರ ಹಾಲಪ್ಪ‌ ಬಸಪ್ಪ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ನವೀನ ಚ ಸವಣೂರ, ಯೋಜನಾಧಿಕಾರಿ ಭಾರತಿ ಚ ಶೆಟ್ಟರ್, ಬಾಲವಿಕಾಸ ಅಕಾಡೆಮಿ ಸ್ಥಾಪಕ ಅಧ್ಯಕ್ಷ ಶಂಕರ ಹಲಗತ್ತಿ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here