ಪುತ್ತೂರು: ಪುತ್ತೂರಿನ ಹೃದಯಭಾಗದ ಹೆಗ್ಡೆ ಆರ್ಕೇಡ್ ನಲ್ಲಿರುವ ಇನ್‌ಸ್ಪಯರ್ ಕೋಚಿಂಗ್ ಕ್ಲಾಸ್ ನಲ್ಲಿ ಏಪ್ರಿಲ್ 1 ರಿಂದ ದ್ವಿತೀಯ ಪಿ.ಯು. ವಿದ್ಯಾರ್ಥಿಗಳಿಗೆ ನೀಟ್(NEET), ಜೆ.ಇ.ಇ.(JEE), ಸಿ.ಇ.ಟಿ.(CET) ತರಗತಿಗಳು ಪ್ರಾರಂಭಗೊಳ್ಳಲಿದೆ. ಇಲ್ಲಿ ಪುತ್ತೂರು, ಮಂಗಳೂರು, ಮೂಡಬಿದಿರೆ, ಉಜಿರೆ ಮುಂತಾದ ಊರುಗಳಲ್ಲಿನ ಕಾಲೇಜುಗಳ ಅನುಭವೀ ಪ್ರಾಧ್ಯಾಪಕರು ತರಗತಿಗಳನ್ನು ನಡೆಸಲಿದ್ದಾರೆ. ಸಿಇಟಿ ಪರೀಕ್ಷಾ ಮಾದರಿಯಲ್ಲಿ ಪ್ರತಿ ದಿನ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಅಧ್ಯಯನ ಸಾಮಗ್ರಿಗಳನ್ನು (study materials) ನೀಡಲಾಗುವುದು.
ಪ್ರತಿ ಆದಿತ್ಯವಾರ online test ಮಾಡಲಾಗುವುದು. CET/JEE/NEET ಗಳಲ್ಲಿ ಒಂದೊಂದು ಅಂಕವೂ ಮುಖ್ಯವಾದ ಕಾರಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ತರಬೇತಿ ನೀಡುವಲ್ಲಿ ಪ್ರಾಧ್ಯಾಪಕರು ಶ್ರಮಿಸಲಿದ್ದಾರೆ. ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಸಂಜೆ ಕೋಚಿಂಗ್ ಈ ಸಂಸ್ಥೆಯಲ್ಲಿ ಐದನೇ ತರಗತಿಯಿಂದ ದ್ವಿತೀಯ ಪಿ.ಯು.ವರೆಗೆ ಎಲ್ಲಾ ವಿಷಯಗಳಿಗೆ ಪ್ರತಿದಿನ ಸಂಜೆ ಐದರಿಂದ ಎಂಟು ಗಂಟೆಯವರೆಗೆ ಕೋಚಿಂಗ್ ನೀಡಲಾಗುತ್ತಿದೆ. ಒಂಭತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಎಪ್ರಿಲ್ ಒಂದರಿಂದ ಮೇ ಹದಿನೈದರವರೆಗೆ ತರಗತಿಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗೆ 7349307261 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.