`ಪುತ್ತೂರು ಬೆಡಿ’ಗೆ ಟೆಂಡರ್ ಹಾಕಿದವರಿಂದ ಸಿಡಿಮದ್ದಿನ ಪ್ರಾಯೋಗಿಕ ಪ್ರದರ್ಶನ-ಗುಣಮಟ್ಟ ಪರೀಕ್ಷಿಸಿದ ದೇವಸ್ಥಾನದ ಆಡಳಿತ ಮಂಡಳಿ

0

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೈಭವದ ಜಾತ್ರೆಯ ಎ.17ರ ಬ್ರಹ್ಮರಥೋತ್ಸವದಂದು ನಡೆಯಲಿರುವ `ಪುತ್ತೂರು ಬೆಡಿ’ ಎಂದೇ ಹೆಸರಿಗೆ ತಕ್ಕಂತೆ ಸಿಡಿಮದ್ದು ಪ್ರದರ್ಶನದಲ್ಲಿ ಯಾವುದೇ ಲೋಪ ಆಗಬಾರದು ಎಂದು ದೇವಳದ ಆಡಳಿತ ಮಂಡಳಿ ಈ ಬಾರಿ ಹೊಸ ಪ್ರಯತ್ನಕ್ಕೆ ಕೈಹಾಕಿದೆ.ಸಿಡಿಮದ್ದು ಪ್ರದರ್ಶನಕ್ಕೆ ಟೆಂಡರ್ ಹಾಕಿದವರಿಂದ ಎ.1ರಂದು ಪ್ರಾಯೋಗಿಕ ಪ್ರದರ್ಶನ ಕೊಡಿಸಿ ಗುಣಮಟ್ಟ ಪರೀಕ್ಷಿಸಿದರು.


ಪುತ್ತೂರು ಬೆಡಿಗೆ ನಾಲ್ಕು ಮಂದಿ ಟೆಂಡರ್ ಹಾಕಿದ್ದರು.ಅವರು ತಮ್ಮ ತಮ್ಮ ಸಂಸ್ಥೆಯ ಸಿಡಿ ಮದ್ದು ಕುರಿತು ದೇವಳಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಎ.೧ರಂದು ಸಂಜೆ ದೇವಳದ ಕಚೇರಿಯಲ್ಲಿ ಮಾಹಿತಿ ನೀಡಿ,ಅದರಿಂದ ಹೊರ ಹೊಮ್ಮುವ ಬಣ್ಣ, ಬೆಳಕು, ಶಬ್ದ ಮತ್ತು ಎಷ್ಟು ವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ ಎಂಬುದರ ಕುರಿತು ವಿವರಿಸಿದರು.ಬಳಿಕ ದೇವಳದ ಗದ್ದೆಯಲ್ಲಿ ಪ್ರಾಯೋಗಿಕ ಪ್ರದರ್ಶನ ನೀಡಿದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ರತ್ನಾಕರ ನಾಕ್, ಡಾ.ಶಶಿಧರ್ ಕಜೆ, ಅಜಿತ್ ರೈ ಉಪಸ್ಥಿತರಿದ್ದರು.ಸಿಡಿಮದ್ದು ಪ್ರದರ್ಶನದ ಸದ್ದು ಕೇಳುತ್ತಿದ್ದಂತೆ ಸಾರ್ವಜನಿಕರು ಆಗಮಿಸಿ ವೀಕ್ಷಿಸಿದರು.

ಪುತ್ತೂರು ಬೆಡಿ ವಿಜ್ರಂಭಿಸಬೇಕು
ಪುತ್ತೂರು ಜಾತ್ರೆಯಲ್ಲಿ `ಪುತ್ತೂರು ಬೆಡಿ’ ಬಹಳ ಪ್ರಸಿದ್ದಿಯಾಗಿರುವುದು.ಆ ಹೆಸರನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.ಈ ನಿಟ್ಟಿನಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಕೊಟೇಷನ್ ಹಾಕಿದವರಿಂದ ಪ್ರಾಯೋಗಿಕ ಪ್ರದರ್ಶನವನ್ನು ನೋಡಿ ಅವರ ಗುಣಮಟ್ಟವನ್ನು ತುಲನೆ ಮಾಡಿ ಆಯ್ಕೆ ಮಾಡಲಾಗುತ್ತದೆ.ಈ ಹಿಂದೆ ಹಲವು ವರ್ಷಗಳಿಂದ ದಿ.ಬಿ.ಟಿ.ರಂಜನ್ ಅವರು ಪುತ್ತೂರು ಬೆಡಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.ಹಾಗಾಗಿ ವ್ಯವಸ್ಥಾಪನಾ ಸಮಿತಿಗೆ ಇದರ ದೊಡ್ಡ ಹೊರೆಯಾಗುತ್ತಿರಲಿಲ್ಲ.ಅವರ ಅನುಪಸ್ಥಿತಿಯಲ್ಲಿ ನಾವು ಸಿಡಿಮದ್ದು ಪ್ರದರ್ಶನದ ವಿಚಾರ ಕಲಿತು ತುಲನೆ ಮಾಡಬೇಕಾಗಿದೆ. ಅದೂ ಅಲ್ಲದೆ ಪುತ್ತೂರು ಬೆಡಿ ವಿಜ್ರಂಭಿಸಬೇಕು-
ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here