ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಬಿಕಾಂ, ಬಿಎಸ್ಸಿಗೆ ಪ್ರಥಮ ರ್‍ಯಾಂಕ್‌ಗಳು

0

ಪುತ್ತೂರು:ಮಂಗಳೂರು ವಿಶ್ವವಿದ್ಯಾಲಯ 2022ರಲ್ಲಿ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಅಂತಿಮ ವಿಭಾಗದ 4 ವಿದ್ಯಾರ್ಥಿಗಳು ರ್‍ಯಾಂಕ್ ಗಳಿಸಿದ್ದಾರೆ. ಬಿಕಾಂ ವಿಭಾಗದ ಆಕಾಂಕ್ಷ ಹೆಚ್. 3500/3343, ಬಿಎಸ್‌ಸಿ ವಿಭಾಗದ ವಿದ್ಯಾರ್ಥಿಗಳಾದ ಅಪೂರ್ವ ಜಿ. 3400/3352, ಶ್ರೀವರದ ಪಿ. 3400/3324, ಬಿಎ ವಿಭಾಗದ ರುಚಿತ ಹೆಗ್ಡೆ 3400/3042 ಅಂಕಗಳನ್ನು ಪಡೆದಿದ್ದಾರೆ.


ಬಿಎ ವಿಭಾಗದಲ್ಲಿ ಒಟ್ಟು 89 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 66 ಮಂದಿ ತೇರ್ಗಡೆಗೊಂಡಿದ್ದಾರೆ. ಬಿಎಸ್‌ಸಿ ವಿಭಾಗದಲ್ಲಿ 142 ಮಂದಿ ಪರೀಕ್ಷೆಗೆ ಹಾಜಾರಾಗಿದ್ದು 125 ಮಂದಿ ಉತ್ತೀರ್ಣರಾಗಿದ್ದಾರೆ. ಬಿಕಾಂ ವಿಭಾಗದ 347 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, 284 ಮಂದಿ ತೇರ್ಗಡೆ ಹೊಂದಿದ್ದಾರೆ. ಬಿಬಿಎ ವಿಭಾಗದಲ್ಲಿ 33 ಮಂದಿ ಪರೀಕ್ಷೆ ಬರೆದಿದ್ದು, 30 ಮಂದಿ ಉತ್ತೀರ್ಣಗೊಂಡಿದ್ದಾರೆ. ಬಿಸಿಎ ವಿಭಾಗದ 81 ಮಂದಿ ಪರೀಕ್ಷೆಗೆ ಹಾಜರಿದ್ದು, 75 ಮಂದಿ ತೇರ್ಗಡೆಗೊಂಡಿದ್ದಾರೆ.

ಸ್ನಾತಕೋತ್ತರ ಪದವಿ:
ಸ್ನಾತಕೋತ್ತರ ಪದವಿಯ ಎಂಎ(ಜೆಎಂಸಿ) ವಿಭಾಗದಲ್ಲಿ 6 ಮಂದಿ, ಎಂಕಾನಲ್ಲಿ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು ಶೇ.100 ಫಲಿತಾಂಶದೊಂದಿಗೆ ತೇರ್ಗಡೆಗೊಂಡಿದ್ದಾರೆ. ಎಂಎಸ್‌ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ 29 ಮಂದಿ ಪರೀಕ್ಷೆಗೆ ಹಾಜರಿದ್ದು, 14 ಮಂದಿ ತೇರ್ಗಡೆಗೊಂಡಿದ್ದಾರೆ. ಎಂಎಸ್‌ಸಿ ಗಣಿತ ವಿಭಾಗದ 6 ಮಂದಿ ಪರೀಕ್ಷೆ ಬರೆದಿದ್ದು, 3 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here