ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪೆರಣ ಬೈಲಿನ ಒಕ್ಕಲಿಗ ಯಾನೆ ಗೌಡ ಸಂಘದ ವಾರ್ಷಿಕ ಸಭೆಯು ಪೆರಣ ದೈವ ಚಾವಡಿಯ ಮನೆಯಲ್ಲಿ ನಡೆಯಿತು.
ರಾಷ್ಟ್ರಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ನೆಲ್ಯಾಡಿ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಾದ ಪೆರಣ ಬೈಲಿನ ಕುಶಾಲಪ್ಪ ಗೌಡರ ಪುತ್ರಿ ಹರ್ಷಿಣಿ ಮತ್ತು ಚಂದ್ರಶೇಖರ ಗೌಡರ ಪುತ್ರಿ ಆಶಿಕರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಿಎಸ್ಎನ್ಎಲ್ನ ನಿವೃತ್ತ ಉದ್ಯೋಗಿ ಎ.ಎಸ್.ಶೇಖರ ಗೌಡ ಅನಿಲಭಾಗ್ ಮತ್ತು ಮಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವೀಣಾ ದಂಪತಿ ಪುತ್ರಿ, ಉಡುಪಿಯಲ್ಲಿ ವೈದ್ಯರಾಗಿರುವ ಡಾ.ಎ.ಎಸ್.ಪೂಜಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೆಂಕಪ್ಪ ಗೌಡ ಡೆಬ್ಬೇಲಿ ಸನ್ಮಾನಿತರಿಗೆ ಅಭಿನಂದನೆ ಸಲ್ಲಿಸಿದರು.
ಒಕ್ಕಲಿಗ ಸೇವಾ ಟ್ರಸ್ಟ್ನ ನಿರ್ದೇಶಕ ರವಿಚಂದ್ರ ಹೊಸವಕ್ಲು, ಗೋಳಿತ್ತೊಟ್ಟು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಕಮಲಾಕ್ಷ ಪಂಡಿತ್, ಗೌರವಾಧ್ಯಕ್ಷರಾದ ವಿಶ್ವನಾಥ ಗೌಡ ಪೆರಣ, ನೋಣಯ್ಯ ಗೌಡ ಅನಿಲ ಶುಭಹಾರೈಸಿದರು. ಮಕ್ಕಳಿಗೆ ಪೆನ್ನು, ಪುಸ್ತಕ ವಿತರಿಸಲಾಯಿತು. ಎ.ಎಸ್ ಶೇಖರ ಗೌಡರವರು ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಗೌರವಿಸಿದರು. ಪುರುಷೋತ್ತಮ ಗೌಡ ಕುದ್ಕೊಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.