ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಬಳಕೆದಾರರು ಕೃಷಿ/ ಗಿಡಗಳಿಗೆ ಹಾಗೂ ಇತರ ಕೆಲಸಗಳಿಗೆ ನೀರನ್ನು ಬಳಸಿದರೆ ನಗರಸಭೆಯಿಂದ ಯಾವುದೇ ಮುನ್ಸೂಚನೆ ನೀಡದೇ ನೀರಿನ ಜೋಡಣೆಯನ್ನು ತುಂಡರಿಸಲಾಗುವುದು ಎಂದು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಬಳಕೆದಾರರು ತಮ್ಮ ಮನೆಗೆ ಪಡೆದುಕೊಂಡಿರುವ ನೀರಿನ ಜೋಡಣೆಯನ್ನು ಇನ್ನಿತರ ಉಪಯೋಗಕ್ಕೆ ಕೃಷಿಗಳಿಗೆ, ಗಿಡಗಳಿಗೆ ಹಾಗೂ ಕಟ್ಟಡ ಕಾಮಗಾರಿಗಳಿಗೆ ಉಪಯೋಗಿಸುತ್ತಿರುವುದಾಗಿ ನಗರಸಭೆಗೆ ದೂರುಗಳು ಬಂದಿರುತ್ತದೆ. ಇದರಿಂದ ಎತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ನೀರಿನ ಜೋಡಣೇದಾರರಿಗೆ ನೀರು ಸಿಗದೇ ಸಮಸ್ಯೆಯಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಮನೆಗೆ ಪಡೆದುಕೊಂಡಿರುವ ನೀರನ್ನು ಕೃಷಿ / ಗಿಡಗಳಿಗೆ ಕೆಲಸಗಳಿಗೆ ಬಳಸಿದರೆ ನಗರಸಭೆಯಿಂದ ಯಾವುದೇ ಮುನ್ಸೂಚನೆ ನೀಡದೇ ಜೋಡಣೆಯನ್ನು ತುಂಡರಿಸಲಾಗುವುದು. ಮುಂದಿನ ಕಷ್ಟ ನಷ್ಟಗಳಿಗೆ ಜೋಡಣೆದಾರರೇ ಹೋಣೆಗಾರರಾಗುತ್ತಾರೆ ಎಂದು ಪೌರಾಯುಕ್ತರು ತಿಳಿಸಿರುತ್ತಾರೆ.