ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ ನಡೆಯಿತು. ಬೆಳಗ್ಗಿನ ಪೂಜೆ ನಂತರ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಶ್ರೀ ರಾಮನಾಮ ತಾರಕ ಮಹಾಯಜ್ಞ ಶ್ರೀ ರಾಮ ದೇವರಿಗೆ ಪವಮಾನ ಸೂಕ್ತ ಕಲಶಾಭಿಷೇಕ, ಶ್ರೀ ರಾಮ ಜಪ ನಡೆಯಿತು. ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಯಜ್ಞದ ಪೂರ್ಣಾಹುತಿ, ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ, ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ, ನಂತರ ಪ್ರಸಾದ ಭೋಜನ ನಡೆಯಿತು.
ಸಂಜೆ ಭಜನೆ, ರಾತ್ರಿ ರಂಗಪೂಜೆ, ಶ್ರೀ ರಾಮದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಪ್ರಸಾದ ಭೋಜನ, ಬಳಿಕ ಕಾಪು ರಂಗತರಂಗ ಕಲಾವಿದರಿಂದ ’ಅಧ್ಯಕ್ಷೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕೀಮಠ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ಅನಂತ ಉಡುಪ, ರಮೇಶ ರೈ ರಾಮಜಾಲು, ಯೋಗೀಶ್ ಕುಲಾಲ್ ಅಜ್ಜಿಕುಮೇರು, ಜನಾರ್ದನ ಗೌಡ ಬಾಂತೊಟ್ಟು, ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ಶೈಲಜಾ ಆಳ್ವಗುತ್ತು, ವಿಮಲಾ ಕರುಣಾಕರ ಆರಿಂಜ ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.