ಕಡಬ: ನೂಜಿಬಾಳ್ತಿಲ ಗ್ರಾಮದ ಬೆಥನಿ ಆಶ್ರಮದ ಪಕ್ಕದ ಹಳೆ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಸಲಕರಣೆ, ಸಾಮಾಗ್ರಿಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಟವುಂಟಾದ ಘಟನೆ ಏ.13ರಂದು ಮುಂಜಾನೆ ನಡೆದಿದೆ.
ಬೆಥನಿ ಆಶ್ರಮದ ಹಳೆ ಕಟ್ಟಡದಲ್ಲಿ ರಬ್ಬರ್ ಶೀಟ್, ತೆಂಗಿನಕಾಯಿ ಸೇರಿದಂತೆ ಸಲಕರಣೆ, ಸಾಮಾಗ್ರಿಗಳು ಇದ್ದು ರಾತ್ರಿ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಲೇ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೆಸ್ಕಾಂ ಜೆ.ಇ. ವಸಂತ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ ಪಿಡಿಒ ಗುರುವ, ಗ್ರಾಮ ಲೆಕ್ಕಾಧಿಕಾರಿ ಶಶಿಕಲಾ, ಪಂಚಾಯತ್ ಉಪಾಧ್ಯಕ್ಷ ಇಮ್ಯಾನುವೆಲ್ ಸದಸ್ಯರಾದ ಚಂದ್ರಶೇಖರ ಹಳೆನೂಜಿ ಭೇಟಿ ನೀಡಿದ್ದಾರೆ.
ಪರಿಶೀಲನೆ ನಡೆಸುತ್ತೇವೆ-ಜೆ.ಇ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಲೇ ಬೆಂಕಿ ಹತ್ತಿಕೊಂಡಿದೆ ಎಂದು ಈಗಲೇ ದೃಢಪಡಿಸಿಲ್ಲ, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿರುವುದು ಕಂಡು ಬಂದಿಲ್ಲ, ಇನ್ನಷ್ಟು ಪರಿಶೀಲನೆ ಮಾಡುತ್ತೇವೆ ಎಂದು ಜೂನಿಯರ್ ಇಂಜಿನಿಯರ್ ವಸಂತ ಅವರು ತಿಳಿಸಿದ್ದಾರೆ.