ಮೈದಾನಿಮೂಲೆ ಮದರಸಕ್ಕೆ ಶೇ.100 ಫಲಿತಾಂಶ- ರೇಂಜ್ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು

0

ಪುತ್ತೂರು: ಇಸ್ಲಾಮಿಕ್ ಎಜ್ಯಕೇಶನಲ್ ಬೋರ್ಡ್ ಆಫ್ ಇಂಡಿಯಾ ನಡೆಸಿದ 2022-23 ಸಾಲಿನ 5, 7 ಹಾಗೂ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಮೈದಾನಿಮೂಲೆ ಹಯಾತುಲ್ ಇಸ್ಲಾಂ ಮದರಸ ಶೇ.100 ಪಲಿತಾಂಶದ ಸಾಧನೆ ಮಾಡಿದ್ದು ರೇಂಜ್‌ನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದೆ.


7ನೇ ತರಗತಿಯ ಖದೀಜಾ (ಉಮ್ಮರ್ ದರ್ಬೆತ್ತಡ್ಕರವರ ಪುತ್ರಿ) 532 ಅಂಕ ಹಾಗೂ ಫಾತಿಮತ್ ಮುರ್ಶಿದಾ (ಅಬ್ದುರ್ರಹ್ಮಾನ್ ಮೈದಾನಿಮೂಲೆ ರವರ ಪುತ್ರಿ) 524 ಅಂಕ ಪಡೆದು ಟಾಪ್ ಗ್ರೇಡ್‌ನಲ್ಲಿ ತೇರ್ಗಡೆ ಹೊಂದಿ ರೇಂಜ್ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.


10ನೇ ತರಗತಿಯ ಫಾತಿಮತ್ ಶುಹೈಬಾ (ಇಬ್ರಾಹೀಂ ಸಾಬ್ ಮುರುವರವರ ಪುತ್ರಿ)378 ಅಂಕ ಹಾಗೂ ಯಾಸ್ಮೀನ್ ತಾಜ್ (ಶೈಖ್ ಅಹ್ಮದ್‌ರವರ ಪುತ್ರಿ) 374 ಅಂಕ ಪಡೆದು ಟಾಪ್ ಡಬಲ್ ಪ್ಲಸ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here