





ಕಡಬ:ಜೆಸಿಐ ವಲಯ 15ರ ಉಪಾಧ್ಯಕ್ಷರಾಗಿ ಕಡಬದ ಕಾಶಿನಾಥ್ ಎನ್. ಗೋಗಟೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


2018ರಲ್ಲಿ ಜೆಸಿಐ ಆಂದೋಲನವನ್ನು ಸೇರಿಕೊಂಡ ಕಾಶಿನಾಥ್ ಅವರು ನಂತರ 2019 ರಲ್ಲಿ ಘಟಕದ ಸಕ್ರಿಯ ಕಾರ್ಯದರ್ಶಿಯಾಗಿ, 2020 -21 ರಲ್ಲಿ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಘಟಕದ ಅಧ್ಯಕ್ಷರಾಗಿ ಹಲವಾರು ವಲಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಹಾಗೂ ಮನ್ನಣೆ ಗಳಿಗೆ ಭಾಜನರಾಗಿದ್ದಾರೆ. 





2023ರಲ್ಲಿ ವಲಯ 15ರ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 2024ರಲ್ಲಿ ಜೆ ಸಿ ಐ ಭಾರತದ ದೇಸಿ ಐ ಫೌಂಡೇಶನ್ ನ ಸ್ಕಾಲರ್ಶಿಪ್ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. 2025ರಲ್ಲಿ ವಲಯ 15 ರ ಕಾರ್ಯಕ್ರಮ ವಿಭಾಗದ ನಿರ್ದೇಶಕರಾಗಿ ಹೌಸ್ ಸ್ಟ್ಯಾಂಡಿಂಗ್ ಜೋನ್ ಡೈರೆಕ್ಟರ್ ರನ್ನರ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.


            







