ಪುತ್ತೂರು: ಚಾರ್ವಾಕ ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ ವರುಣ ದೀಪ ಕಾರ್ಯಕ್ರಮ ನಡೆಯಿತು. ನಾಣಿಲ ಮನೋಹರ ಇವರ ಮನೆಯಲ್ಲಿ ವರುಣ ದೀಪ ಕಾರ್ಯಕ್ರಮ ಆರಂಭಗೊಂಡಿದ್ದು, 11 ದಿನಗಳ 11ಮನೆಗಳಲ್ಲಿ ಕನಿಷ್ಠ 11 ಜನ ಸೇರಿ ನಡೆಸುವ ವರುಣಮಂತ್ರ ಜಪದ ಕಾರ್ಯಕ್ರಮವು ಡಿವೈನ್ ಪಾರ್ಕ್ ಸಂಸ್ಥೆಯ ಅದ್ಯಾತ್ಮಿಕ ಗುರುಗಳಾದ ಡಾಕ್ಟರ್ಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತದೆ.
ಅನಾವೃಸ್ಟಿ ದೂರಾಗಲು ಸಮೃದ್ಧ ಮಳೆಯಾಗಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿವೇಕ ಜಾಗ್ರತ ಬಳಗಗಳು ಈ ವರುಣದೀಪ ನಡೆಸುತ್ತಾರೆ. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷೆ ಸುನಂದಾ ಕೆ.ಎಂ, ಉಪಾಧ್ಯಕ್ಷ ಮೋನಪ್ಪ ಗೌಡ ಉಳವ, ಕುಶಾಲಪ್ಪ ಗೌಡ ದೈಪಿಲ, ಕೆ .ವಿ ಮಾಧವ ಕರಂದ್ಲಾಜೆ,ಮನೋಹರ ನಾಣಿಲ, ಉಷಾ ಮನೋಹರ, ಆನಂದ ಕುಂಬಾರ, ವೆಂಕಟ್ರಮಣ ಕಂಡಿಗ, ವಿಜಯ ಕಂಡಿಗ ಮತ್ತಿತರರು ಪಾಲ್ಗೊಂಡರು.