ಕೊಡಿಪ್ಪಾಡಿ: ಬೈಕ್‌ಗಳ ಅಪಘಾತ- ಗಾಯ

0

ಪುತ್ತೂರು:ಬೈಕ್‌ಗಳರೆಡರ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಕೊಡಿಪ್ಪಾಡಿ ಗ್ರಾಮದ ಕೊಂಟ್ರುಪ್ಪಾಡಿ ಎಂಬಲ್ಲಿ ಎ.22ರಂದು ನಡೆದಿದೆ.
ಕೊಡಿಪ್ಪಾಡಿ ಗ್ರಾಮದ ಆನಾಜೆ ನಿವಾಸಿ ಸುಧಾಕರ ಕೆ.ಎಂಬವರು ಕೊಡಿಪ್ಪಾಡಿಯಿಂದ ಪುತ್ತೂರು ಕಡೆ ಚಲಾಯಿಸುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಲತೀಶ್ ಎ ಎಂಬವರು ಚಲಾಯಿಸುತ್ತಿದ್ದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಎರಡೂ ಬೈಕ್‌ಗಳ ಸವಾರರು ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here