ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಕೌಶಲ್ಯ ತರಬೇತಿ

0


ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ 2022-2023ನೇ ಸಾಲಿನ ಶೈಕ್ಷಣಿಕ ವರ್ಷದ ಕೌಶಲ್ಯಾಭಿವೃದ್ದಿ,ಉದ್ಯಮಶೀಲತೆ ಮತ್ತು ಜೀವನೋಪಾಯದ “ಉದ್ಯೋಗ ನೈಪುಣ್ಯ ತರಬೇತಿ” ಕಾರ‍್ಯಕ್ರಮ ನಡೆಯಿತು.


ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಉದ್ಗಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಗಾಟಿಸಿದ ಮುಖ್ಯ ಅತಿಥಿಗಳಾದ ಶ್ರೀ ಅಚ್ಯುತ ನಾಯಕ್ ಹೆಚ್. ಖಜಾಂಜಿ ವಿವೇಕಾನಂದ ವಿದ್ಯಾವರ್ಧಕ ಸಂಘ ಇವರು ಮಾತನಾಡುತ್ತಾ ಆತ್ಮನಿರ್ಭರ ಭಾರತದ ಕನಸಿನೊಂದಿಗೆ ಜೋಡಿಸಲ್ಪಟ್ಟ ಈ ಕಾರ‍್ಯಕ್ರಮದ ಆಶಯದಂತೆ “ನಾವು ನಮ್ಮ ಕಾಲಮೇಲೆ ನಿಂತಾಗ ನಮ್ಮ ಆರ್ಥಿಕ ಸ್ಥಿತಿಯೊಂದಿಗೆ ದೇಶದ ಆರ್ಥಿಕ ಸ್ಥಿತಿಯೂ ಹೆಚ್ಚಿದಂತಾಗುತ್ತದೆ”.ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.


ಕಾರ‍್ಯಕ್ರಮದ ಅಧ್ಯಕ್ಷರಾದ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಆಡಳಿತ ಮಂಡಳಿ ಅಧ್ಯಕ್ಷರು ವಿವೇಕಾನಂದ ಪಾಲಿಟೆಕ್ನಿಕ್ ಇವರು ಮಾತನಾಡುತ್ತಾ “ಸಾಮಾನ್ಯ ಕೆಲಸಗಾರನಲ್ಲಿ ನೈಪುಣ್ಯತೆಯನ್ನು ತುಂಬಿದಾಗ ಅವನೊಬ್ಬ ಪ್ರಾಮಾಣಿಕೃತ ಕೌಶಲ್ಯಯುತ ಕೆಲಸಗಾರನಾಗುತ್ತಾನೆ.ಇದರಿಂದ ಅವನ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಗ್ರಾಮದ ಸುಧಾರಣೆ ಹಾಗೂ ದೇಶದ ಅಭಿವೃದ್ಧಿ ಸಾಧಿಸಿದಂತಾಗುತ್ತದೆ” ಎಂದು ನುಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಈಶ್ವರಚಂದ್ರ ಹಾಗೂ ಶ್ರೀ ರವಿಮುಂಗ್ಲಿಮನೆ,ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಇವರು ಸ್ವಾಗತಿಸಿದರು. ಧನ್ಯವಾದ ಸಮರ್ಪಣೆಯನ್ನು ಕೌಶಲ್ಯ ತರಬೇತಿಯ ಸಂಯೋಜಕರಾದ ಶ್ರೀ ವಿನ್ಯಾಸ್ ಉಪನ್ಯಾಸಕರು ಆಟೋಮೊಬೈಲ್ ವಿಭಾಗ ಇವರು ನೆರವೇರಿಸಿದರು.ಜಯಲಕ್ಷ್ಮಿ.ಎಸ್.ಹಿರಿಯ ಉಪನ್ಯಾಸಕಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಇವರು ಪ್ರಾರ್ಥಿಸಿದರು.ಕಾರ‍್ಯಕ್ರಮದ ನಿರೂಪಣೆಯನ್ನು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳೀಧರ್.ಎಸ್ ನೆರವೇರಿಸಿದರು.

LEAVE A REPLY

Please enter your comment!
Please enter your name here