ಪುತ್ತೂರು: ನಗರಸಭಾ ವ್ಯಾಪ್ತಿಯ ಸಾಲ್ಮರ-ಜಿಡೆಕಲ್ಲು-ಬೆದ್ರಾಳ ಮುಖ್ಯ ರಸ್ತೆಯ ಅಗಲೀಕರಣ ಸಂದರ್ಭ ಮುಚ್ಚಿರುವ ನೀರಿನ ಮೋರಿಗಳನ್ನು ಸರಿಪಡಿಸದೆ ಡಾಮರೀಕರಣಗೊಳಿಸಲಾಗಿದೆ ಎಂದು ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ನಗರಸಭೆ ಆಯುಕ್ತರಿಗೆ ದೂರು ನೀಡಲಾಗಿದೆ.
ಜಿಡೆಕಲ್ಲು ಬಳಿ ಇತ್ತೀಚೆಗೆ ರಸ್ತೆ ಅಗಲೀಕರಣಗೊಳಿಸಿ ಡಾಮರು ಹಾಕಲಾಗಿದೆ. ಮಳೆನೀರು ಹರಿಯುವ ಮೋರಿಗಳು ಬ್ಲಾಕ್ ಆಗಿದೆ. ಬಹಳ ಸಮಯಗಳಿಂದ ಈ ಮೋರಿಗಳು ಮುಚ್ಚಿಹೋಗಿರುವ ಬಗ್ಗೆ ಈ ಹಿಂದೆ ಹಲವು ಬಾರಿ ದೂರು ನೀಡಿ ದುರಸ್ತಿಗೆ ವಿನಂತಿಸಲಾಗಿದೆ. ಡಾಮರೀಕರಣ ಸಂದರ್ಭದಲ್ಲಿಯೂ ಈ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿರುವುದಿಲ್ಲ. ಮಳೆ ನೀರು ರಸ್ತೆಗಳಲ್ಲೇ ಹರಿದು ಡಾಮರೀಕರಣ ಹಾಳಾಗುತ್ತವೆ. ಆದ್ದರಿಂದ ಬ್ಲಾಕ್ ಆಗಿರುವ ಮೋರಿಗಳನ್ನು ಸರಿಪಡಿಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.