ಪುತ್ತೂರು: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಯ್ಯಲ್ಗ ನಿವಾಸಿ, ಕೃಷಿಕ ಜನಾರ್ದನ ಬಂಗೇರ (42ವ.)ರವರು ಸ್ಪರ್ಧಿಸುತ್ತಿದ್ದಾರೆ.
ನೆಯ್ಯಲ್ಗ ನಿವಾಸಿ ಮುಂಡಪ್ಪ ಪೂಜಾರಿ ಮತ್ತು ಸೀತ ದಂಪತಿ ಪುತ್ರರಾಗಿರುವ ಜನಾರ್ದನ ಬಂಗೇರ ಅವರು ಬಿ.ಎ.ಪದವೀಧರರಾಗಿದ್ದು ಸುಮಾರು 10 ವರ್ಷ ಹೈದರಾಬಾದ್‌ನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ನಂತರ ಉದ್ಯೋಗ ಬಿಟ್ಟು ಮನೆಯಲ್ಲಿ ಅಗರ್‌ವುಡ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಧರ್ಮಪರಿಪಾಲನಾ ಸಂಘದ ದ.ಕ.ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸದಸ್ಯರಾಗಿದ್ದಾರೆ. ಜನಾರ್ದನ ಬಂಗೇರ ಅವರು ಆಮ್ ಆದ್ಮಿ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯೂ ಆಗಿದ್ದಾರೆ.