ಬೆಟ್ಟಂಪಾಡಿ ಕಾಲೇಜಿನಲ್ಲಿ ‘ಟ್ಯಾಲೆಂಟ್ ಗ್ಯಾಲರಿ’ ಉದ್ಘಾಟನೆ

0

ಪಠ್ಯ ಪೂರಕ ಚಟುವಟಿಕೆಗಳು ಸ್ಪರ್ಧಾತ್ಮಕ ಜಗತ್ತಿಗೆ ಪೂರಕ – ಡಾ. ವರದರಾಜ ಚಂದ್ರಗಿರಿ

ಬೆಟ್ಟಂಪಾಡಿ: ಪದವಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯವಾಗಿದೆ. ಈ ರೀತಿಯ ಚಟುವಟಿಕೆಗಳು ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವೆನಿಸುವ ಕೌಶಲ್ಯಗಳನ್ನು ಒಬ್ಬ ಪದವೀಧರನಲ್ಲಿ ತುಂಬಲು ಸಾಧ್ಯ’ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಪ್ರಾಂಶುಪಾಲ‌ ಡಾ.ವರದರಾಜ ಚಂದ್ರಗಿರಿ ಹೇಳಿದರು.


ಕಾಲೇಜಿನ ವಾಣಿಜ್ಯ ಸಂಘದ ನೇತೃತ್ವದಲ್ಲಿ ನಿರ್ವಹಿಸುತ್ತಿರುವ ಈ ಶೈಕ್ಷಣಿಕ ವರ್ಷದ ‘ಟ್ಯಾಲೆಂಟ್ ಗ್ಯಾಲರಿ’ ಸೂಚನಾ ಫಲಕವನ್ನು ಉದ್ಘಾಟಿಸಿ ಮಾತನಾಡಿದ ಇವರು ಈ ಸೂಚನಾ ಫಲಕವನ್ನು ನಿಮ್ಮ ಪಠ್ಯ ಪೂರಕ ವಿಷಯಗಳಿಗೆ ಸಂಬಂಧಿಸಿದಂತೆ ಮೀಸಲಿಟ್ಟು ಪ್ರಸ್ತುತ ವಿದ್ಯಮಾನಗಳ ಅರಿವು ಬೆಳೆಸಿಕೊಳ್ಳಿ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಎಸ್, ವಾಣಿಜ್ಯ ವಿಭಾಗದ ಉಪನ್ಯಾಸಕರುಗಳು, ವಾಣಿಜ್ಯ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಅಧ್ಯಕ್ಷೆ ಕವಿತಾ ಎಸ್. ಪೈ ನಿರ್ವಹಿಸಿದರು.

LEAVE A REPLY

Please enter your comment!
Please enter your name here