ಕಾವುನಲ್ಲಿ ಸುಸಜ್ಜಿತ ಆಳ್ವ ಕಾಂಪ್ಲೆಕ್ಸ್ ಶುಭಾರಂಭ

0

ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿಕೊಂಡರೆ ವ್ಯಾಪಾರದಲ್ಲಿ ಯಶಸ್ಸು ಸಾಧ್ಯ : ಒಡಿಯೂರು ಶ್ರೀ

ಪುತ್ತೂರು: ಒಬ್ಬ ವ್ಯಕ್ತಿ ತಾನು ಮಾಡುವ ವ್ಯವಹಾರದಲ್ಲಿ ಯಶಸ್ಸು ಗಳಿಸಬೇಕಾದರೆ ವ್ಯಾಪಾರದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಗ್ರಾಹಕರೊಂದಿಗೆ ವಿಶ್ವಾಸ ಮತ್ತು ನಂಬಿಕೆ ಅತೀ ಮುಖ್ಯ. ಗ್ರಾಹಕರಿಗೆ ಮೋಸ ಮಾಡದೇ ಒಳ್ಳೆಯ ರೀತಿಯಲ್ಲಿ ಗ್ರಾಹಕರ ಆಸೆ ಆಕಾಂಕ್ಷೆಗಳನ್ನು ಪೂರೈಸಿದರೆ ವ್ಯಾಪಾರದಲ್ಲಿ ಯಶಸ್ಸು ಸಾಧ್ಯ ಒಟ್ಟಿನಲ್ಲಿ ಶ್ರದ್ಧೆ ಮತ್ತು ಶ್ರಮ ಅತೀ ಅಗತ್ಯ. ಈ ನಿಟ್ಟಿನಲ್ಲಿ ವಿಠಲ ಆಳ್ವರು ಯಶಸ್ಸನ್ನು ಕಂಡಿದ್ದಾರೆ. ಅವರ ನಿರ್ಮಾಣದ ಈ ವಾಣಿಜ್ಯ ಕಾಂಪ್ಲೆಕ್ಸ್ ಎಲ್ಲಾ ವಿಧದಲ್ಲೂ ಒಂದು ಉತ್ತಮ ಕಾಂಪ್ಲೆಕ್ಸ್ ಆಗಿದ್ದು ಇದರಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಹಾಗೂ ಕಾಂಪ್ಲೆಕ್ಸ್ ಮಾಲಕರಿಗೆ ಯಶಸ್ಸು ಸಿಗಲಿ ಎಂದು ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಕಾವುನಲ್ಲಿ ವಿಠಲ ಆಳ್ವ ಕಲಾಯಿ ಬಾಯಾರುಗುತ್ತು ನಿರ್ಮಾಣದ ಆಳ್ವ ಕಾಂಪ್ಲೆಕ್ಸ್ ಅನ್ನು ರಿಬ್ಬನ್ ತುಂಡರಿಸಿ, ದೀಪ ಬೆಳಗಿಸುವ ಮೂಲಕ ಮೇ.3 ರಂದು ಶುಭಾರಂಭಗೊಳಿಸಿ ಲೋಕಾರ್ಪಣೆ ಮಾಡಿದರು. ಧರ್ಮದ ದಾರಿಯಲ್ಲಿ ಯಾರು ಹೆಜ್ಜೆ ಹಾಕುತ್ತಾರೋ ಅವರಿಗೆ ಜೀವನದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದ ಸ್ವಾಮೀಜಿಯವರು, ವಿಠಲ ಆಳ್ವರ ಧರ್ಮನಿಷ್ಠೆ, ಸ್ವಾಮಿನಿಷ್ಠೆ ಹಾಗೂ ಅವರು ಗ್ರಾಹಕರೊಂದಿಗೆ, ಸಮಾಜದೊಂದಿಗೆ ನಡೆದುಕೊಂಡ ರೀತಿಯೇ ಅವರಿಗೆ ಗೆಲುವನ್ನು ತಂದುಕೊಟ್ಟಿದೆ. ವಿಠಲ ಆಳ್ವರಿಗೆ ದೇವರು ಇನ್ನಷ್ಟು ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೇಳಿ ಆಶೀರ್ವಚನ ನೀಡಿದರು.


ಆಳ್ವರು ಸಮಾಜದ ಪ್ರೀತಿ ಗಳಿಸಿಕೊಂಡಿದ್ದಾರೆ: ಕಾವು ಹೇಮನಾಥ ಶೆಟ್ಟಿ
ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ವಿಠಲ ಆಳ್ವರವರು ಬಡಕುಟುಂಬದಿಂದ ಬಂದು ಮೊದಲಿಗೆ ಹೊಟೇಲ್ ಉದ್ಯಮ ಆರಂಭಿಸಿ ಅಲ್ಲಿಂದ ಗ್ರಾಹಕರ ಪ್ರೀತಿ ವಿಶ್ವಾಸ ಪಡೆದುಕೊಂಡು ಮುಂದೆ ಜಿನಸು ವ್ಯಾಪಾರ ಆರಂಭಿಸಿದರು ಆ ಮೂಲಕ ಇಂದು ಉನ್ನತ ಮಟ್ಟಕ್ಕೆ ಏರಿದ್ದಾರೆ. ತನ್ನ ಸರಳ ಸಜ್ಜನಿಕತೆ ಹಾಗೂ ಜಾತ್ಯಾತೀತ ಮನೋಭಾವ ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ಕಾಣುವ ವಿಠಲ ಆಳ್ವರವರು ಸಮಾಜದ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ ಎಂದರು. ಒಬ್ಬ ವ್ಯಕ್ತಿ ಆತ ಒಳ್ಳೆಯವನಾಗಿದ್ದರೆ ಆತನಲ್ಲಿಗೆ ಗ್ರಾಹಕರು, ಜನರು ಬಂದೇ ಬರುತ್ತಾರೆ ಇಂತಹ ಗುಣ ವಿಠಲ ಆಳ್ವರಲ್ಲಿದೆ ಎಂದ ಹೇಮನಾಥ ಶೆಟ್ಟಿಯವರು, ವಿಠಲ ಆಳ್ವರವರು ವ್ಯಾಪಾರದೊಂದಿಗೆ ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡವರಾಗಿದ್ದಾರೆ. ಅವರ ಕಾಂಪ್ಲೆಕ್ಸ್ ಎದುರು ಭಾಗದಲ್ಲಿ ಧ್ವಜಸ್ತಂಭವನ್ನು ನಿರ್ಮಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆದಿದ್ದಾರೆ ಎಂದರು. ಬೆಳೆಯುತ್ತಿರುವ ಕಾವು ಪೇಟೆಗೆ ಆಳ್ವ ಕಾಂಪ್ಲೆಕ್ಸ್ ಒಂದು ಮುಕುಟಗರಿ ಇದ್ದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾವುನಲ್ಲಾಗಲಿ, ಆಳ್ವ ಕಾಂಪ್ಲೆಕ್ಸ್‌ನಲ್ಲಿ ವ್ಯವಹಾರ ಮಾಡುವವರಿಗೆ ಮತ್ತು ವಿಠಲ ಆಳ್ವರಿಗೆ ಯಶಸ್ಸು ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಶ್ರೀ ಜೋಡುದೈವಗಳ ಕ್ಷೇತ್ರ ಅಮರ ಕಾಸ್ಪಡಿ ಚಾರ್ವಕ ಇದರ ಆಡಳಿದಾರರಾದ ಕುಸುಮಾಧರ ರೈ ಕಾಸ್ಪಡಿಗುತ್ತು ಮಾತನಾಡಿ, ಯಾವುದೇ ಒಂದು ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಕಠಿಣ ಪರಿಶ್ರಮ ಮತ್ತು ಛಲ ಅತೀ ಮುಖ್ಯ ಇದಕ್ಕಿಂತ ಹೆಚ್ಚಾಗಿ ದೈವ ಬಲವು ಬೇಕು, ದೈವಬಲವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಈ ನಿಟ್ಟಿನಲ್ಲಿ ವಿಠಲ ಆಳ್ವರಿಗೆ ದೈವಬಲದೊಂದಿಗೆ ಗ್ರಾಹಕರ ಪ್ರೀತಿ, ವಿಶ್ವಾಸದ ಬಲವು ಸಿಕ್ಕಿದ್ದು ಆ ಮೂಲಕ ಅವರು ಇಂದು ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ಅವರಿಗೆ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.


ಗೌರವಾರ್ಪಣೆ
ಕ್ಲಪ್ರ ಸಮಯಕ್ಕೆ ಕಾಂಪ್ಲೆಕ್ಸ್ ನಿರ್ಮಾಣ ಮಾಡಿಕೊಟ್ಟ ಕೆಲಸಗಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯವಾಗಿ ಸೆಂಟ್ರಿಂಗ್ ಕೆಲಸಗಾರರಾದ ದಯಾನಂದ ಗೌಡ ಕೆಮ್ಮತ್ತಡ್ಕ ಮತ್ತು ಮೇಸ್ತ್ರೀ ಕೆಲಸಗಾರರಾದ ಅಣ್ಣು ಪೂಜಾರಿ ಪಿಲಿಪಂಜರರವರುಗಳನ್ನು ಶಾಲು, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ನನ್ಯ ತುಡರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುಬ್ರಾಯ ಬಲ್ಯಾಯ, ಕಾವು ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ಅಜೀಜ್ ಬುಶ್ರಾ, ಕ್ಯಾಂಪ್ಕೋ ನಿವೃತ್ತ ಚೀಪ್ ಮ್ಯಾನೇಜರ್ ರಾಧಾಕೃಷ್ಣ ಬೋರ್ಕರ್, ಒಡಿಯೂರು ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೇಶಕ ಮೋನಪ್ಪ ಪೂಜಾರಿ ಕೆರೆಮಾರು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಾವು ದಿವ್ಯನಾಥ ಶೆಟ್ಟಿ, ರಾಧಾಕೃಷ್ಣ ಆಳ್ವ ಕಲಾಯಿ ಬಾಯಾರುಗುತ್ತು, ನಿವೃತ್ತ ವೈದ್ಯರಾದ ಡಾ. ರಮಾನಂದ ಬನಾರಿ ಉಪಸ್ಥಿತರಿದ್ದರು. ವಂಶ ಸುಧೀರ್ ಆಳ್ವ ಪ್ರಾರ್ಥಿಸಿದರು. ಆಳ್ವ ಕಾಂಪ್ಲೆಕ್ಸ್ ಮಾಲಕ ವಿಠಲ ಆಳ್ವ ಸ್ವಾಗತಿಸಿದರು. ವಿಠಲ ಆಳ್ವ, ಅವರ ಪತ್ನಿ ನಾಗವೇಣಿ ವಿಠಲ ಆಳ್ವ, ಪುತ್ರ ಸೃಜನ್ ಆಳ್ವ ಮತ್ತು ಪುತ್ರಿ ಸೃಜನ್ಯ ಆಳ್ವರವರು ಸ್ವಾಮೀಜಿಗೆ ಫಲಪುಷ್ಪ ಅರ್ಪಿಸಿ ಹಾರಾರ್ಪಣೆ ಮಾಡಿದರು. ಮೋಹನ್ ಆಳ್ವ ಕಲಾಯಿ, ಶಿವರಾಮ ಪೂಜಾರಿ ಕೆರೆಮಾರು, ಅಣ್ಣು ಪೂಜಾರಿ ಪಿಲಿಪಂಜರ, ರವೀಂದ್ರ ಪೂಜಾರಿ ಮಂಜಕೊಟ್ಯ, ಶಿವಕುಮಾರ್ ಕಾವು, ನಾರಾಯಣ ಆಳ್ವ, ಶ್ರೀಪತಿ ಭಟ್, ಸುಜಿತ್ ಆಳ್ವ, ಸೃಜನ್ ಆಳ್ವ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪವನ್ ಆಳ್ವ ಕಲಾಯಿ ವಂದಿಸಿದರು. ದೇವಣ್ಣ ರೈ ಕಾವು ಕಾರ್ಯಕ್ರಮ ನಿರೂಪಿಸಿದರು.


ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಕಾಂಪ್ಲೆಕ್ಸ್
ಪ್ರಾರಂಭದಲ್ಲಿ ಹೊಟೇಲ್ ಉದ್ಯಮ ಆ ಬಳಿಕ ಜಿನಸು ವ್ಯಾಪಾರ ಉದ್ಯಮಕ್ಕೆ ಕಾಲಿಟ್ಟ ವಿಠಲ ಆಳ್ವ ಕಲಾಯಿ ಬಾಯಾರುಗುತ್ತುರವರು ಕಳೆದ ೨೦ ವರ್ಷಗಳಿಂದ ವ್ಯಾಪಾರ ಕ್ಷೇತ್ರದಲ್ಲಿ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿದ್ದಾರೆ. ಕಾವುನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಆಳ್ವ ಕಾಂಪ್ಲೆಕ್ಸ್ ನಿರ್ಮಾಣದ ಮೂಲಕ ಗ್ರಾಹಕರಿಗೆ ಮತ್ತಷ್ಟು ಸೇವೆಯನ್ನು ನೀಡಲು ತಯಾರಾಗಿದ್ದಾರೆ. ವಿಶಾಲ ಪಾಕಿಂಗ್ ವ್ಯವಸ್ಥೆಯೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಕಾಂಪ್ಲೆಕ್ಸ್ ಹೊಂದಿದೆ.

LEAVE A REPLY

Please enter your comment!
Please enter your name here