ಹಾರಾಡಿಯಲ್ಲಿ ವಾಹನ ಅಪಘಾತ- ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಹಾರಾಡಿಯಲ್ಲಿ ವಾಹನ ಅಪಘಾತಗೊಂಡು ಗಾಯಗೊಂಡ ವ್ಯಕ್ತಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದ್ದಾರೆ.


ಹಾರಾಡಿಯಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿತ್ತು. ಅಪಘಾತದಿಂದ ನಗರಸಭೆ ವಾಹನ ಚಾಲಕ ಕೆಮ್ಮಾಯಿ ನಿವಾಸಿ ಅಶೋಕ್ ಅವರು ಗಾಯಗೊಂಡಿದ್ದರು. ಇದೇ ಸಂದರ್ಭ ಅದೇ ದಾರಿಯಾಗಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಗಾಯಾಳು ಅಶೋಕ್ ಅವರನ್ನು ಉಪಚರಿಸಿ ಪುತ್ತೂರು ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದರು.

LEAVE A REPLY

Please enter your comment!
Please enter your name here