ಪುತ್ತೂರು : ಮಾರ್ಚ್ 2023ರಲ್ಲಿ ಜರುಗಿದ 10ನೆ ತರಗತಿಯ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ 32 ಅಭ್ಯರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಈ ತನಕ ಒಟ್ಟು 16 ಬಾರಿ 100 ಶೇಕಡಾ ಫಲಿತಾಂಶ ದಾಖಲಾಗಿದೆ.
ಹಾಜರಾದ ಒಟ್ಟು 32 ಅಭ್ಯರ್ಥಿಗಳ ಪೈಕಿ 5 ಅಭ್ಯರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೃಷಾ ಡಿ. ಸಾಲಿಯಾನ್ – 607 (ದಿನೇಶ್ ಕುಮಾರ್ ಡಿ. ಮತ್ತು ಮಮತಾ ಡಿ., ಬೆಳ್ಳಾರೆ ಇವರ ಪುತ್ರಿ), ಸನಾ ಫಾತಿಮಾ – 551 (ಎಂ.ಎ. ರಫೀಕ್ ಮತ್ತು ಎಸ್. ಮುನೀರಾ, ಸವಣೂರು ಇವರ ಪುತ್ರಿ), ಸಮಹಿತ್ ಜೈನ್ – 545 (ಶತ್ರುಂಜಯ ಆರಿಗ ಮತ್ತು ಪ್ರಮೀಳಾ ಜೈನ್, ಬೆಳಂದೂರು ಇವರ ಪುತ್ರ), ಅತೀಕ್ಷ್ ಶೆಟ್ಟಿ – 542 (ಶ್ರೀನಿವಾಸ್ ಶೆಟ್ಟಿ ಮತ್ತು ಪ್ರತಿಭಾ ಶೆಟ್ಟಿ, ಮಾಡಾವು ಇವರ ಪುತ್ರ) ಮತ್ತು ನಿಷ್ಮತ್ ಫಾತಿಮಾ – 532 (ಕೆ. ಮಹಮ್ಮದ್ ಮತ್ತು ನೂರುನ್ನೀಸಾ, ಸವಣೂರು ಇವರ ಪುತ್ರಿ) ಇವರೆಲ್ಲರೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಉಳಿದಂತೆ 25 ಅಭ್ಯರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 2 ಅಭ್ಯರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಕಾಲೇಜಿಜಿನ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.