ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ನೀಡಿದ ಸಾಧನೆ ಇದು- ಹೇಮಲತಾ ಗೋಕುಲ್‌ನಾಥ್
ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಿಂದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಒಟ್ಟು 120 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು 15 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಸತತ ಎಂಟು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಎಸ್.ಎಸ್.ಎಲ್.ಸಿ ಮಿಷನ್ 100 ತರಬೇತಿ ತರಗತಿಯು ಪರೀಕ್ಷೆಯ ಭಯದಿಂದ ತತ್ತರಿಸುತ್ತಿರುವ ಹಲವಾರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ದಾರಿದೀಪವಾಗಿದೆ. ಪ್ರಗತಿಯ ಈ ವಿಶೇಷ ಪರೀಕ್ಷಾ ತಯಾರಿ ಮೂಲಕ ಶೇಕಡ 90 ಫಲಿತಾಂಶಕ್ಕೆ ಕಾರಣವಾದ ಹೆಗ್ಗಳಿಕೆ ಪ್ರಗತಿ ಸಂಸ್ಥೆಯದಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕುಲನಾಥ್ ತಿಳಿಸಿರುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ ಪರೀಕ್ಷೆಗೆ ತಯಾರುಗೊಳಿಸಿ ವಿದ್ಯಾರ್ಥಿಗಳಿಂದ ಇಂತಹ ಅದ್ಭುತವಾದ ಫಲಿತಾಂಶ ಬಂದಿರುವುದು ಪ್ರಗತಿಗೆ ಸಂದ ಗೌರವ ಎಂದು ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ತಿಳಿಸಿದ್ದಾರೆ.