ಅಪೂರ್ವ 606 ಅಂಕ, 20 ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶ್ರೇಣಿ, ಶಾಲೆಗೆ ಎ ಗ್ರೇಡ್
ಪುತ್ತೂರು: ಎಪ್ರಿಲ್ 2023 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಆಂಗ್ಲ ಮಾಧ್ಯಮದಲ್ಲಿ ಹಾಜರಾದ 42 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 97.62 ಫಲಿತಾಂಶ ದಾಖಲಾಗಿದೆ. ಎ+ 8, ಎ 13, ಬಿ+ 7, ಬಿ ೦9 ಹಾಗೂ ೦4 ವಿದ್ಯಾರ್ಥಿಗಳು ಸಿ+ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಸ್ಥಾನವನ್ನು ಅಪೂರ್ವ – 606 (ಹಾರಾಡಿ ಶ್ರೀಧರ ಶೆಟ್ಟಿ ಮತ್ತು ಬೇಬಿ ಶೆಟ್ಟಿರವರ ಪುತ್ರಿ) ದ್ವಿತೀಯ ಸ್ಥಾನವನ್ನು ಆದಿತ್ಯಶಂಕರ್ ಕೆ – 591 (ವರ್ಕಾಡಿ ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್ ಯವರ ಪುತ್ರ) ಮತ್ತು ತೃತೀಯ ಸ್ಥಾನವನ್ನು ಸುಪ್ರಿಯಾ ಎಂ 588 (ಬೆಂಗಳೂರು ಮಂಜ ಶೆಟ್ಟಿ ಬಿ ಜಿ ಮತ್ತು ಮಾಲಾ ಹೆಚ್ ರವರ ಪುತ್ರಿ) ಅಂಕಗಳನ್ನು ಪಡೆದಿರುತ್ತಾರೆ. ಕನ್ನಡ ಮಾಧ್ಯಮದಿಂದ ಪರೀಕ್ಷೆಗೆ ಹಾಜರಾದ 54 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 96.29 ಫಲಿತಾಂಶ ಪಡೆದಿದೆ. ಎ+ 2, ಎ 9, ಬಿ+ 16, ಬಿ 17, ಸಿ+ 07 ಹಾಗೂ 01 ವಿದ್ಯಾರ್ಥಿಗಳು ಸಿ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಸ್ಥಾನವನ್ನು ವಿನ್ಯಾ ಜಿ 570 (ಮಂಜಲ್ಪಡ್ಪು ಗಣೇಶ ನಾಯ್ಕ ಮತ್ತು ನಳಿನಿ ರವರ ಪುತ್ರಿ) ಮತ್ತು ದ್ವಿತೀಯ ಸ್ಥಾನವನ್ನು ಆದಿತ್ಯ ಬಿ ಗೌಡ 568 (ಪೋಳ್ಯ ಬಾಲಕೃಷ್ಣ ಗೌಡ ಕೆ ಮತ್ತು ಪದ್ಮಾವತಿಯವರ ಪುತ್ರ) ಮತ್ತು ತೃತೀಯ ಸ್ಥಾನವನ್ನು ಶ್ರಾವ್ಯ 557 (ಕೊಡಿಪ್ಪಾಡಿ ಬಾಬಣ್ಣ ಡಿ ಮತ್ತು ಜಯಂತಿ ರವರ ಪುತ್ರಿ) ಪಡೆದಿರುತ್ತಾರೆ.
ವಿಶಿಷ್ಟತಾ ಶ್ರೇಣಿಯಲ್ಲಿ ಶ್ರಾವ್ಯ 583 (ದರ್ಬೆ ಲಕ್ಷ್ಮಿನಾರಾಯಣ ಬಿ ಎನ್ ಮತ್ತು ಆಶಾಲತಾ ರವರ ಪುತ್ರಿ) ಸಾತ್ವಿಕ್ ಎನ್ ಎಸ್ 580 (ನೆಹರುನಗರ ಸದಾಶಿವ ಎನ್ ಮತ್ತು ಶಾಂತಿರವರ ಪುತ್ರ) ಕುಶಾನ್ ಕುಮಾರ್ ಪಿ 576 (ಪೋಳ್ಯ ಹೇಮಂತ್ ಕುಮಾರ್ ಪಿ ಮತ್ತು ಜಯಂತಿ ಪಿರವರ ಪುತ್ರ), ಯಜ್ಞಾ 569 (ಪಡ್ಡಾಯೂರು ನಾರಾಯಣ ಮತ್ತು ಜಯಶ್ರೀ ರವರ ಪುತ್ರಿ) ಅರ್ಪಿತಾ 567 (ಕೆಮ್ಮಾಯಿ ಹರೀಶ ಮತ್ತು ಸವಿತಾ ಯವರ ಪುತ್ರಿ), ಪ್ರಾರ್ಥನಾ ಬಿ 561 (ಬಂಗಾರಡ್ಕ ಡಾ ಶ್ರೀಪ್ರಕಾಶ್ ಬಿ ಯವರ ಪುತ್ರಿ), ಜ್ಯೋತಿ ಎಂ- 557 (ಕೊಡಿಪ್ಪಾಡಿ ಮೋಹನ್ ಮತ್ತು ವೇದಾವತಿ ಎಂ ಯವರ ಪುತ್ರಿ), ಲಕ್ಷ್ಯ – 556 (ಕೊಡಿಂಬಾಡಿ ಚಂದ್ರಶೇಖರ ರೈ ಮತ್ತು ಹೇಮಲತಾ ರೈ ಯವರ ಪುತ್ರಿ), ಮಧುಶ್ರೀ 548 (ನೆಹರುನಗರ ದೇವರಾಜ್ ಮತ್ತು ಶಶಿಕಲಾ ರವರ ಪುತ್ರಿ) , ಸೃಜನ್ ಕೆ ಪಿ 546 (ದರ್ಬೆತಡ್ಕ ಪ್ರವೀಣ ಪೂಜಾರಿ ಮತ್ತು ತ್ರಿವೇಣಿ ಯವರ ಪುತ್ರ), ಮನ್ವಿತ್ ಬಿ ಸಿ 540 (ಬನ್ನೂರು ಚಂದ್ರಾಕ್ಷಾ ಎನ್ ಮತ್ತು ದೇವಕಿ ಕೆ ರವರ ಪುತ್ರ), ಹಿತೇಶ್ ಡಿ ಸಿ 539 (ಬಲ್ನಾಡು ಡಿ ಚಂದ್ರಹಾಸ ಗೌಡ ಮತ್ತು ಭವ್ಯರವರ ಪುತ್ರ), ಶ್ರೇಯಸ್ 539 (ಕಬಕ ಚಂದ್ರಯ್ಯ ಆಚಾರ್ಯ ಮತ್ತು ಜಯ ಎನ್ ಯವರ ಪುತ್ರ) ಹಾಗೂ ಪವಿತ್ ರೈ 534 (ಉರ್ಲಾಂಡಿ ಲೋಕೇಶ್ ರೈ ಪಿ ಮತ್ತು ಯಶೋದಾ ಎಲ್ ರೈ ಯವರ ಪುತ್ರ) ಉತ್ತೀರ್ಣರಾಗಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಎ ಯವರು ತಿಳಿಸಿರುತ್ತಾರೆ.