ಕಾಣಿಯೂರು ಮಠದಲ್ಲಿ ನರಸಿಂಹ ಜಯಂತಿ – ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಶ್ರೀ ಜಗದ್ಗುರು ಮಧ್ವಾಚಾರ್ಯರ ಮಹಾಸಂಸ್ಥಾನ೦ ಶ್ರೀ ಕಾಣಿಯೂರು ಮಠದ ಪೀಠಾಧಿಪತಿ ಶ್ರೀ ವಿಧ್ಯಾವಲ್ಲಭ ತೀರ್ಥ ಮಹಾ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ” ಶ್ರೀ ನರಸಿಂಹ ಜಯಂತಿ ” ಬಾಬ್ತು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಮೇ 5ರಂದು ” ಸ್ಯಮಂತಕ ಮಣಿ ” ಯಕ್ಷಗಾನ ತಾಳಮದ್ದಳೆ ನಡೆಯಿತು.


ಮುಮ್ಮೇಳದಲ್ಲಿ ಭವ್ಯ ಶ್ರೀ ಕುಲ್ಕುಂದ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಬೇಂದ್ರೋಡಿ ಲಕ್ಷ್ಮೀಶ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ ಸಿ ಅಡಿಗ ( ಶ್ರೀ ಕೃಷ್ಣ ), ಕಿಶೋರಿ ದುಗ್ಗಪ್ಪ ನಡುಗಲ್ಲು ( ಜಾಂಬವ ), ಹರಿಣಾಕ್ಷೀ ಜೆ ಶೆಟ್ಟಿ ( ಬಲರಾಮ ), ಪ್ರೇಮಲತಾ ಟಿ ರಾವ್ ( ನಾರದ ) ಸಹಕರಿಸಿದರು. ಸ್ವಾಮೀಜಿಯವರು ಕಲಾವಿದರನ್ನು ಗೌರವಿಸಿದರು, ಸಂಚಾಲಕ ಭಾಸ್ಕರ್ ಬಾರ್ಯ ಕಲಾವಿದರನ್ನು ಪರಿಚಯಿಸಿದರು, ಶ್ರೀ ಮಠದ ವ್ಯವಸ್ಥಾಪಕ ನಿರಂಜನ ಆಚಾರ್ ಸ್ವಾಗತಿಸಿದರು. ಸದಾನಂದ ಕಾಣಿಯೂರು ವಂದಿಸಿದರು.

LEAVE A REPLY

Please enter your comment!
Please enter your name here