ಬಿಳಿನೆಲೆ- ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

0


ಕಡಬ: ಶ್ರೀ ಸಂಪುಟ ನರಸಿಂಹ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೆ ಒಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಗೆ ಎಸ್.ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.


ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ 5 ಮಂದಿ, ಪ್ರಥಮ ಶ್ರೇಣಿಯಲ್ಲಿ 35 ಮಂದಿ, ದ್ವಿತೀಯ ಶ್ರೇಣಿಯಲ್ಲಿ 5 ಮಂದಿ, ತೃತೀಯ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿ ತೇರ್ಗಡೆ ಹೊಂದಿದ್ದಾರೆ. ಜ್ಞಾನೇಶ(600), ಶಬರೀಶ(593), ಶಿವಶಂಕರ ಭಟ್(591), ಸುಕೇಶ(563), ಉದಿತ್ ಕುಮಾರ್(551) ಅಂಕಗಳನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here