ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಭಾರಿಯಂತೆ ದೇವಳದ ದೇವರಮಾರು ಗದ್ಧೆಯಲ್ಲಿ ಬಿತ್ತನೆ ಮಾಡುವ ನಿಟ್ಟಿನಲ್ಲಿ ಅಡಿಕೆ ಸಿಪ್ಪೆ ಮತ್ತು ಸೊಪ್ಪಿನ ಅವಶ್ಯಕತೆಯಿದ್ದು, ಭಕ್ತರು ಸಹಕಾರ ನೀಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ವಿಜ್ಞಾಪನೆ ಮಾಡಿದೆ.
ಕಳೆದ ವರ್ಷ ದೇವಳದ ಮುಂಭಾಗದ ದೇವರ ಮಾರು ಗದ್ದೆಯಲ್ಲಿ ಭಕ್ತರ ಸಹಕಾರದಿಂದ ಬಿತ್ತನೆ ನಡೆಸಿ ಉತ್ತಮ ಫಲವನ್ನು ಪಡೆದಿರುತ್ತೇವೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಈ ವರ್ಷ ಬಿತ್ತನೆ ಮಾಡಲು ಕಳೆದ ವರ್ಷದಂತೆ ಅಡಿಕೆ ಸಿಪ್ಪೆ ಹಾಗು ಸೊಪ್ಪು ಬೇಕಾಗಿರುತ್ತದೆ, ಅಡಿಕೆ ಸಿಪ್ಪೆ, ಸೊಪ್ಪು ಇರುವವರು ದೇವಳಕ್ಕೆ ನೀಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ತಾವು ಸಿಪ್ಪೆ, ಸೊಪ್ಪನ್ನು ನೇರವಾಗಿ ತಂದು ಒಪ್ಪಿಸಬಹುದು ಅಥವಾ ತಿಳಿಸಿದಲ್ಲಿ ಪಿಕ್ಕಪ್ ತಂದು ನಾವು ಸಾಗಾಟ ಮಾಡುತ್ತೇವೆ. ಈ ನಿಟ್ಟಿನಲ್ಲಿ ಭಕ್ತರು ಮೊಬೈಲ್ ಸಂಖ್ಯೆ 9449030872 ಗೆ ಕರೆ ಮಾಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.